ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಡಿಂಗ್ರಿ ನಾಗರಾಜ್ – 73

ಕನ್ನಡ ರಂಗಭೂಮಿ, ಸಿನಿಮಾ ಮತ್ತು ಕಿರುತೆರೆ ನಟ ಡಿಂಗ್ರಿ ನಾಗರಾಜ್ ಅವರು ಇಂದು (ಜೂನ್‌ 6) 73ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಸುಬ್ಬಯ್ಯನಾಯ್ಡು ಕಂಪನಿಯಲ್ಲಿ ನಾಟಕಕ್ಕೆ ಮೊದಲ ಬಾರಿ ಬಣ್ಣ ಹಚ್ಚಿದಾಗ ಅವರಿಗೆ ಐದು ವರ್ಷ. ಇಲ್ಲಿರುವ ಫೋಟೊ ಗುಬ್ಬಿ ಕಂಪನಿಯ ‘ರಾಜಭಕ್ತಿ’ ನಾಟಕದ್ದು. ಆಗ ಅವರಿಗೆ ಹತ್ತು ವರ್ಷ. ಬಾಲನಟನಾಗಿ ಹತ್ತಾರು ನಾಟಕಗಳಲ್ಲಿ ನಟಿಸಿದ ಅವರು ‘ಪರಸಂಗದ ಗೆಂಡೆತಿಮ್ಮ’ (1978) ಚಿತ್ರದೊಂದಿಗೆ ಬೆಳ್ಳಿತೆರೆ ಪ್ರವೇಶಿಸಿದರು. ಅವರ ಬಣ್ಣದ ಬದುಕಿಗೀಗ 68 ವರ್ಷ.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು