ಪಿ.ಆರ್.ಕೌಂಡಿನ್ಯ ನಿರ್ದೇಶನದ ‘ಶಿವರಾತ್ರಿ ಮಹಾತ್ಮೆ’ (1964) ಚಿತ್ರದಲ್ಲಿ ರಾಜಶ್ರೀ, ರಾಜಕುಮಾರ್, ನರಸಿಂಹರಾಜು, ಧೂಳಿಪಾಲ. ಎಸ್.ಎಸ್.ರಾಜು ಮತ್ತು ಪಿ.ಅರ್.ಕೌಂಡಿನ್ಯ ನಿರ್ಮಾಣದ ಚಿತ್ರದ ಕತೆ, ಚಿತ್ರಕಥೆ, ಸಂಭಾಷಣೆ ಮತ್ತು ಗೀತರಚನೆ ವಿಭಾಗದಲ್ಲಿ ಚಿ.ಸದಾಶಿವಯ್ಯ ಮತ್ತು ಚಿ.ಉದಯಶಂಕರ್ ಕೆಲಸ ಮಾಡಿದ್ದರು. ಶಿವಪ್ರಸಾದ್ ಸಂಗೀತ ಸಂಯೋಜನೆ, ಮಾಥುರ್ ಛಾಯಾಗ್ರಹಣ, ಕೆ.ಎ.ಮಾರ್ತಾಂಡ್ ಸಂಕಲನ ಚಿತ್ರಕ್ಕಿದೆ. ಲೀಲಾವತಿ, ಕೆ.ಎಸ್.ಅಶ್ವಥ್, ಜಯಶ್ರೀ, ವಾಸುದೇವ ಗಿರಿಮಾಜಿ ಇತರರು ಇನ್ನಿತರೆ ಪಾತ್ರಗಳಲ್ಲಿ ಅಭಿನಯಿಸಿದ್ದರು. (ಫೋಟೊ ಕೃಪೆ: ‘ವಿಜಯಚಿತ್ರ’ ಸಿನಿಪತ್ರಿಕೆ ವಿಶೇಷ ಸಂಚಿಕೆ)

ಶಿವರಾತ್ರಿ ಮಹಾತ್ಮೆ
- ಕನ್ನಡ ಸಿನಿಮಾ
Share this post