ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಬಿ.ಹನುಮಂತಾಚಾರ್

ನಟ, ಸಂಗೀತಗಾರ
ಪೋಸ್ಟ್ ಶೇರ್ ಮಾಡಿ

ಬಿ.ಹನುಮಂತಾಚಾರ್ ಹುಟ್ಟೂರು ಬಳ್ಳಾರಿ ಜಿಲ್ಲೆ ಕಂಪ್ಲಿ. ಬಾಲ್ಯದಲ್ಲೇ ಸಂಗೀತದೆಡೆ ಆಸಕ್ತರಾಗಿದ್ದ ಅವರು ಗದುಗಿನ ಪಂಚಾಕ್ಷರಿ ಗವಾಯಿಗಳ ಬಳಿ ಎಂಟು ವರ್ಷ ಹಿಂದೂಸ್ತಾನಿ ಸಂಗೀತ ಅಭ್ಯಾಸ ಮಾಡಿದರು. ನಟನೆ, ಸಂಗೀತದಲ್ಲಿ ಒಲವಿದ್ದ ಅವರಿಗೆ ವೃತ್ತಿರಂಗಭೂಮಿ ಕೈಹಿಡಿಯಿತು. ಕೆಲ ವರ್ಷ ರಂಗಭೂಮಿಯಲ್ಲಿ ತೊಡಗಿಸಿಕೊಂಡ ಅವರು ಮದರಾಸಿನ ಜೈನ್ ಶಾಲೆಯೊಂದರಲ್ಲಿ ಸಂಗೀತ ಶಿಕ್ಷಕರಾಗಿ ಕೆಲಸ ಮಾಡಿದರು. ಹಾರ್ಮೋನಿಯಂ ಮತ್ತು ವಿಶೇಷವಾಗಿ ಯೂನಿವಾಕ್ಸ್ ವಾದ್ಯದಲ್ಲಿ ಅವರಿಗೆ ಅಪಾರ ಪರಿಣತಿಯಿತ್ತು. ಸಿನಿಮಾಗಳಲ್ಲಿ ಯೂನಿವಾಕ್ಸ್ ವಾದ್ಯ ಬಳಕೆ ಮಾಡಿದ್ದಾರಲ್ಲದೆ ಯೂನಿವಾಕ್ಸ್‌ ಕಚೇರಿಗಳನ್ನು ಕೊಟ್ಟಿದ್ದಾರೆ.

ಸ್ವಭಾವತಃ ಹಾಸ್ಯ ಪ್ರವೃತ್ತಿಯ ವ್ಯಕ್ತಿ. ಉತ್ತಮ ಕನ್ನಡ ಭಾಷಾ ಶೈಲಿ ಮತ್ತು ರಂಗಭೂಮಿ ಜನಪ್ರಿಯತೆ ಹನುಮಂತಾಚಾರ್‌ ಅವರನ್ನು ಚಿತ್ರರಂಗಕ್ಕೆ ಕರೆತಂದಿತು. ‘ಗುಣಸಾಗರಿ’ ಚಿತ್ರದಲ್ಲಿನ ಅವರ ಪಾತ್ರ ಪ್ರೇಕ್ಷಕ ಅಪಾರ ಮೆಚ್ಚುಗೆಗೆ ಪಾತ್ರವಾಯ್ತು. ಮುಂದೆ ದೇವಕನ್ನಿಕಾ, ದೈವಸಂಕಲ್ಪ, ಭಕ್ತವಿಜಯ, ಸಂತಸಕ್ಕು, ಕಿತ್ತೂರು ಚೆನ್ನಮ್ಮ, ಮಕ್ಕಳ ರಾಜ್ಯ, ಮಹಾಪ್ರಚಂಡರು, ಪ್ರೇಮಮತ್ಸರ.. ಹೀಗೆ ಸಾಲು, ಸಾಲು ಚಿತ್ರಗಳಲ್ಲಿ ನಟಿಸುತ್ತಾ ಬಂದರು. ಈ ವೇಳೆಗಾಗಲೇ ಎಲೆಕ್ಟ್ರಾನಿಕ್ ಕೀಬೋರ್ಡ್ ಪ್ರಚಲಿತವಾಗಿದ್ದುದರಿಂದ ಯೂನಿವಾಕ್ಸ್‌ ವಾದ್ಯಕ್ಕೆ ಮನ್ನಣೆ ಕಡಿಮೆಯಾಯ್ತು. ನಟನೆಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡ ಹನುಮಂತಾಚಾರ್‌ ಸುಮಾರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

‘ಹೇಮಾವತಿ’ ಚಿತ್ರದಲ್ಲಿ ನಟನಾಗಿ ಬಿ.ಹನುಮಂತಾಚಾರ್‌ (ಕುದುರೆ ಮೇಲೆ ಕುಳಿತಿರುವವರು). ನಿರ್ದೇಶಕ ಸಿದ್ದಲಿಂಗಯ್ಯ, ಸಹಾಯಕ ನಿರ್ದೇಶಕ ಬೂದಾಳು ಕೃಷ್ಣಮೂರ್ತಿ ಮತ್ತಿತರರು ಫೋಟೋದಲ್ಲಿ ಇದ್ದಾರೆ.

ಹನುಮಂತಾಚಾರ್‌ ಅವರ ಇಬ್ಬರು ಗಂಡುಮಕ್ಕಳು ರಾಜಕುಮಾರ್ ಮತ್ತು ಕೃಷ್ಣಕುಮಾರ್‌ ಬಾಲನಟರಾಗಿ ಗುರುತಿಸಿಕೊಂಡಿದ್ದರು. ಮಾ.ರಾಜಕುಮಾರ್‌ ಕನ್ನಡ, ತೆಲುಗು, ತಮಿಳಿನ ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಬಾಲನಟನಾಗಿ ಕಾಣಿಸಿಕೊಂಡಿದ್ದಾರೆ. ‘ರಾಮು’ ತಮಿಳು ಚಿತ್ರದ ಉತ್ತಮ ನಟನೆಗೆ ಅವರಿಗೆ ಅತ್ಯುತ್ತಮ ಬಾಲನಟ ರಾಷ್ಟ್ರಪ್ರಶಸ್ತಿ ಸಂದಿದೆ. ನಟನೆ ಜೊತೆ ಸಂಗೀತವನ್ನೂ ಅಭ್ಯಾಸ ಮಾಡಿದ ಅವರು ವೃತ್ತಿಪರ ಸಂಗೀತಗಾರ. 1987ರ ನವೆಂಬರ್‌ 7ರಂದು ರೈಲು ಆಕಸ್ಮಿಕವೊಂದರಲ್ಲಿ ಬಿ.ಹನುಮಂತಾಚಾರ್ ಅಗಲಿದರು.


ಬಿ.ಹನುಮಂತಾಚಾರ್‌ | ಜನನ: 22/03/1922 | ನಿಧನ: 07/11/1987

(ಮಾಹಿತಿ ಕೃಪೆ: ರುಕ್ಕೋಜಿ ಅವರ ಡಾ.ರಾಜಕುಮಾರ್ ಸಮಗ್ರ ಚರಿತ್ರೆ)

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಚಿತ್ರರಂಗಕ್ಕೆ ಆಸರೆಯಾದ ಅರಸು

ಮೈಸೂರು ಅರಸು ಕುಟುಂಬದವರು ಕೆಂಪರಾಜ ಅರಸ್. ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಡಿ.ದೇವರಾಜ ಅರಸು ಅವರ ಸಹೋದರ. ಗುಬ್ಬಿ ವೀರಣ್ಣನವರು ನಿರ್ಮಿಸಿದ  `ಜೀವನ

ನಟ, ನಿರ್ಮಾಪಕ ಬಿ.ಎಂ.ವೆಂಕಟೇಶ್

ಬೆಂಗಳೂರು ಸಮೀಪದ ಇಮ್ಮಡಿಹಳ್ಳಿಯ ವೆಂಕಟೇಶ್‌ ಅವರಿಗೆ ಶಾಲೆಯಲ್ಲಿ ಓದುತ್ತಿದ್ದಾಗ ಗಾಯಕನಾಗುವ ಉಮೇದು ಇತ್ತು. ಹಿನ್ನೆಲೆ ಗಾಯಕನಾಗುವ ಆಸೆಯಿದ್ದ ಅವರು ಕ್ರಮೇಣ

ಯಶಸ್ವೀ ಚಿತ್ರನಿರ್ದೇಶಕ ವಿಜಯ್

ತಾರಾವ್ಯವಸ್ಥೆಯ ಪರಿಣಾಮಗಳಿಂದ ತೆರೆಯ ಮರೆಯಲ್ಲಿಯೇ ಉಳಿದ  ವಿಜಯ್ ಅವರು ತಾರೆಗಳ ಹಂಗಿಲ್ಲದೆ ನಿರ್ದೇಶಿಸಿದ ‘ರಂಗಮಹಲ್ ರಹಸ್ಯ’ ಅಪೂರ್ವ ಸಸ್ಪೆನ್ಸ್ ಚಿತ್ರ.