ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಕಾಂಚನ – 82

ಸಿದ್ದಲಿಂಗಯ್ಯ ನಿರ್ದೇಶನದ ‘ಬಿಳಿಗಿರಿಯ ಬನದಲ್ಲಿ’ (1980) ಚಿತ್ರದಲ್ಲಿ ಶ್ರೀನಿವಾಸಮೂರ್ತಿ ಮತ್ತು ಕಾಂಚನ. ಆಂಧ್ರ ಮೂಲದ ಕಾಂಚನ ಅವರ ಜನ್ಮನಾಮ ವಸುಂಧರಾ ದೇವಿ. ಬಾಲ್ಯದಲ್ಲೇ ಭರತನಾಟ್ಯ ಪ್ರವೀಣೆಯಾಗಿದ್ದ ವಸುಂಧರಾ ಸಿನಿಮಾ ನಟಿಯಾದದ್ದು ಆಕಸ್ಮಿಕ. ತಂದೆಗೆ ವ್ಯವಹಾರದಲ್ಲಿ ನಷ್ಟವಾದಾಗ ಕುಟುಂಬಕ್ಕೆ ನೆರವಾಗಲು ಗಗನಸಖಿಯಾಗಿ ಕೆಲಸಕ್ಕೆ ಸೇರಿದರು. ನಿರ್ದೇಶಕ ಸಿ.ವಿ.ಶ್ರೀಧರ್‌ ಸ್ನೇಹಿತರೊಬ್ಬರು ವಿಮಾನದಲ್ಲಿ ಕಾಂಚನರನ್ನು ಗಮನಿಸಿ ಸಿನಿಮಾಗೆ ಶಿಫಾರಸು ಮಾಡಿದ್ದು ಅವರ ವೃತ್ತಿಬದುಕಿನ ತಿರುವು. ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಂಚನ ಅಭಿನಯಿಸಿದ್ದಾರೆ. ಇಂದು ಅವರ 82ನೇ ಹುಟ್ಟುಹಬ್ಬ. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

Share this post