ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಬಿಳಿಹೆಂಡ್ತಿ – ಆರತಿ

ಮೇಲುಕೋಟೆಯಲ್ಲಿ `ಬಿಳಿಹೆಂಡ್ತಿ’ (1975) ಸಿನಿಮಾ ಶೂಟಿಂಗ್ ಬಿಡುವಿನ ವೇಳೆ ನಾಯಕನಟಿ ಆರತಿ ಹುಟ್ಟುಹಬ್ಬ ಆಚರಣೆಯ ಸಂದರ್ಭ ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ಅವರ ಕ್ಯಾಮರಾಗೆ ಸೆರೆಯಾಗಿದ್ದು ಹೀಗೆ. ನಿರ್ದೇಶಕ ಪುಟ್ಟಣ್ಣ ಕಣಗಾಲ್, ‘ಬಿಳಿಹೆಂಡ್ತಿ’ ಚಿತ್ರದಲ್ಲಿ ನಟಿಸಿದ ಅಮೆರಿಕ ಮೂಲದ ಯುವತಿ ಮಾರ್ಗರೆಟ್ ಥಾಮ್ಸನ್ ಫೋಟೋದಲ್ಲಿದ್ದಾರೆ. ‘ಗೆಜ್ಜೆಪೂಜೆ’ (1970) ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾದ ಆರತಿ ಕನ್ನಡ ಚಿತ್ರರಂಗದ ಯಶಸ್ವೀ ನಾಯಕನಟಿಯರಲ್ಲೊಬ್ಬರು. ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ನಾಗರಹಾವು, ಎಡಕಲ್ಲು ಗುಡ್ಡದ ಮೇಲೆ, ಧರ್ಮಸೆರೆ, ಪಡುವಾರಹಳ್ಳಿ ಪಾಂಡವರು, ರಂಗನಾಯಕಿ, ಹೊಂಬಿಸಿಲು, ಉಪಾಸನೆ, ಶುಭಮಂಗಳ… ಅವರ ಕೆಲವು ಪ್ರಮುಖ ಚಿತ್ರಗಳು. ‘ಮಿಠಾಯಿ ಮನೆ’ (2005) ಅವರ ನಿರ್ದೇಶನದ ಸಿನಿಮಾ. ಇಂದು (ಆಗಸ್ಟ್‌ 16) ಆರತಿ ಅವರ ಹುಟ್ಟುಹಬ್ಬ.

Share this post