ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಕೋಪ ಮಾಡಿಕೊಂಡ ಉದಯ್‌ಕುಮಾರ್‌

ಪೋಸ್ಟ್ ಶೇರ್ ಮಾಡಿ
ಅಶ್ವತ್ಥ ನಾರಾಯಣ
ನಟ

ಐದಾರು ಟೇಕ್‍ಗಳಾದರೂ ಶಾಟ್ ಓಕೆಯಾಗಲಿಲ್ಲ. `ಜಿ.ವಿ.ಅಯ್ಯರ್ ಅವರು ಮಾಡುವಂಥ ಪಾತ್ರವನ್ನು ಈ ಹುಡುಗನಿಗೆ ಕೊಟ್ಟಿದ್ದೀರಿ..’ ಎನ್ನುತ್ತಾ ಉದಯಕುಮಾರ್ ಕೋಪ ಮಾಡಿಕೊಂಡು ಸೆಟ್‍ನಿಂದ ಆಚೆ ಹೋಗಿಬಿಡುತ್ತಿದ್ದರು.

ಬೆಳ್ಳಿತೆರೆಯಲ್ಲಿ ನನಗೆ ತಿರುವು ಕೊಟ್ಟಿದ್ದು `ಚಂದವಳ್ಳಿಯ ತೋಟ’ ಚಿತ್ರದ ಸುಬ್ಬಾಭಟ್ಟನ ಪಾತ್ರ. ಅಲ್ಲಿಯವರೆಗೆ ಪುಟ್ಟ ಪಾತ್ರಗಳಲ್ಲಿರುತ್ತಿದ್ದ ನನಗೆ ಇದು ದೊಡ್ಡ ಅವಕಾಶ. ರಾಜ್ ಶಿಫಾರಸಿನ ಮೇಲೆ ನಿರ್ದೇಶಕ ಸಿಂಗ್‍ಠಾಕೂರ್ ಪಾತ್ರ ಕೊಟ್ಟಿದ್ದರು. ಪಾತ್ರಕ್ಕೆಂದು ತಲೆ ಬೋಳಿಸಿಕೊಂಡು, ಕಚ್ಚೆಪಂಚೆ ಹಾಕಿ ಕ್ಯಾಮರಾ ಎದುರು ನಿಂತಿದ್ದೆ. ನಟ ಉದಯಕುಮಾರ್ ಅವರೊಂದಿಗೆ ನಾನು ನಟಿಸಬೇಕಿತ್ತು. ಅದೇಕೋ ಅಂದು ಪದೇಪದೇ ಡೈಲಾಗ್ ಮರೆತುಹೋಗಿ ಬಾಯಿ ಒಣಗುತ್ತಿತ್ತು. ಉದಯಕುಮಾರ್ ಎದುರು ನಟಿಸುವಾಗ ಕೊಂಚ ಆತಂಕ ಕಾಡುತ್ತಿತ್ತು. ಐದಾರು ಟೇಕ್‍ಗಳಾದರೂ ಶಾಟ್ ಓಕೆಯಾಗಲಿಲ್ಲ. `ಜಿ.ವಿ.ಅಯ್ಯರ್ ಅವರು ಮಾಡುವಂಥ ಪಾತ್ರವನ್ನು ಈ ಹುಡುಗನಿಗೆ ಕೊಟ್ಟಿದ್ದೀರಿ..’ ಎನ್ನುತ್ತಾ ಉದಯಕುಮಾರ್ ಕೋಪ ಮಾಡಿಕೊಂಡು ಸೆಟ್‍ನಿಂದ ಆಚೆ ಹೋಗಿಬಿಡುತ್ತಿದ್ದರು.

ಮತ್ತೆರಡು ಟೇಕ್‍ಗಳಾದರೂ ಅದೇ ಕತೆಯಾಯ್ತು. ಅದೆಲ್ಲಿತ್ತೋ ಧೈರ್ಯ, `ಪ್ಯಾಕ್‍ಅಪ್’ ಎಂದವನೇ ನಾನೂ ಹೊರಟುಬಿಟ್ಟೆ! ರಾಜ್‍ಗೆ ಈ ಕತೆ ಗೊತ್ತಾಯ್ತು. ಮರುದಿನ ತಮ್ಮ `ಶಿವರಾತ್ರಿ ಮಹಾತ್ಮೆ’ ಚಿತ್ರೀಕರಣ ಬಿಟ್ಟು ನನಗೆ ಧೈರ್ಯ ತುಂಬಲು ಸೆಟ್‍ಗೆ ಬಂದಿದ್ದರು. ರಾತ್ರಿಯಿಡೀ ಮನಸ್ಸಿನಲ್ಲೇ ಡೈಲಾಗ್ ಮನನ ಮಾಡಿಕೊಂಡ ನಾನು ಒಂದೇ ಟೇಕ್‍ಗೆ ಶಾಟ್ ಓಕೆ ಮಾಡಿದೆ. ಸುಬ್ಬಾಭಟ್ಟನ ಪಾತ್ರ ಯಶಸ್ವಿಯಾಯ್ತು. ಈ ಪಾತ್ರ ಮುಂದೆ ನನಗೆ ಸಾಲು, ಸಾಲು ಅವಕಾಶಗಳನ್ನು ತಂದುಕೊಟ್ಟಿತು.

ಮತ್ತಷ್ಟು ಸೋಜಿಗ

ಜನಪ್ರಿಯ ಪೋಸ್ಟ್ ಗಳು

ಟೀ ಕುಡಿಯುತ್ತಿದ್ದ ಆನೆ!

(ಫೋಟೊ – ಬರಹ: ಪ್ರಗತಿ ಅಶ್ವತ್ಥ ನಾರಾಯಣ) ವನ್ಯಜೀವಿಗಳು ಮತ್ತು ಮಾನವನ ಮಧ್ಯೆಯ ಸ್ನೇಹ, ಬಾಂಧವ್ಯದ ಕುರಿತ ಹಲವು ಕತೆಗಳು

ಅರೆ ನೀವು, ಒಳಗೆ ಮಲಗಿದ್ರಲ್ವಾ?

ನಾಲ್ಕು ಹೆಜ್ಜೆ ಹಾಕುತ್ತಿದ್ದಂತೆ ಅವರಿಗಲ್ಲಿ ನಾನು ಎದುರಾದೆ! `ಅರೆ ನೀವು, ಒಳಗೆ ಮಲಗಿದ್ರಲ್ವಾ?’ ಎಂದು ಗಾಬರಿಯಿಂದ ಕೇಳಿದರು. `ಸಾರ್, ನಾನು