ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ದಿಕ್ಕಾಪಾಲಾಗಿ ಓಡಿದೆವು..!

ಪೋಸ್ಟ್ ಶೇರ್ ಮಾಡಿ
ಡಿಂಗ್ರಿ ನಾಗರಾಜ್‌
ನಟ

ಕಾರಿನಲ್ಲಿ ನಾನು, ಡ್ರೈವರ್‌ ಇಬ್ಬರೇ. ಮೂರ್ನಾಲ್ಕು ಕಿಲೋ ಮೀಟರ್ ಹೋಗುತ್ತಿದ್ದಂತೆ ಡ್ರೈವರ್‌ ಕಾರಿನ ಬ್ರೇಕ್ ಒತ್ತಿದ. ಎದುರಿಗೆ ಏಳೆಂಟು ಆನೆಗಳ ಹಿಂಡು! ಡ್ರೈವರ್‌ ಬ್ರೇಕ್ ಒತ್ತುದ್ದಿದ್ದಂತೆ ಹಿಂಡಿನಲ್ಲಿದ್ದ ಪುಟಾಣಿ ಆನೆಯೊಂದು ಕಾರಿನ ಬಳಿ ಓಡಿ ಬರಬೇಕೆ?

ಸಿನಿಮಾ ಪ್ರವೇಶಿಸಿದ ಹೊಸದರಲ್ಲಿ ನನಗೆ ಅಸ್ತಿತ್ವದ ಪ್ರಶ್ನೆ ಕಾಡುತ್ತಿತ್ತು. ಹೊಟ್ಟೆಪಾಡಿಗೆ ದಾರಿ ಮಾಡಿಕೊಳ್ಳಬೇಕಲ್ಲ? ಹಾಗಾಗಿ ಚಿತ್ರೀಕರಣದಲ್ಲಿ ಯಾವುದೇ ಕೆಲಸ ಕೊಟ್ಟರೂ ನಿರ್ವಹಿಸಲು ಸಿದ್ಧನಾಗಿದ್ದೆ. ಸ್ನೇಹಿತರಾಗಿದ್ದ ಗೋನಾಳ್ ಭೀಮರಾವ್ ತಮ್ಮ `ಪ್ರಶಸ್ತಿ’ ಚಿತ್ರದ ನಿರ್ಮಾಣ ನಿರ್ವಹಣೆ ನೋಡಿಕೊಳ್ಳಲೆಂದು ನನ್ನನ್ನು ಕರೆದೊಯ್ದಿದ್ದರು. (ಕಾರಣಾಂತರಗಳಿಂದ ಈ ಸಿನಿಮಾ ಪೂರ್ಣಗೊಳ್ಳಲಿಲ್ಲ). ಖ್ಯಾತ ಹಿಂದಿ ನಟ ಅಮೋಲ್ ಪಾಲೇಕರ್ ಚಿತ್ರದ ನಾಯಕ. ಹೆಗ್ಗಡದೇವನ ಕೋಟೆಯ ಕಾಡಿನಲ್ಲಿ ಶೂಟಿಂಗ್. ಕಾಡಿನ ಮಧ್ಯೆ ಇದ್ದ ಪ್ರವಾಸಿ ಮಂದಿರದಲ್ಲಿ ಕಲಾವಿದರು ಹಾಗೂ ಚಿತ್ರತಂಡದವರು ಉಳಿದುಕೊಳ್ಳುವ ವ್ಯವಸ್ಥೆಯಾಗಿತ್ತು. ನಾವು ಉಳಿದುಕೊಂಡಿದ್ದ ಪ್ರವಾಸಿ ಮಂದಿರ, ಹೆಗ್ಗಡದೇವನ ಕೋಟೆಯ ಚೆಕ್‌ಪೋಸ್ಟ್‌ನಿಂದ ಕಾಡಿನೊಳಗೆ 20 ಕಿಲೋ ಮೀಟರ್ ದೂರವಿತ್ತು. ಬೆಳಗ್ಗೆ ಐದಕ್ಕೇ ಎದ್ದು ಊಟೋಪಚಾರಕ್ಕೆ ಬೇಕಾದ ತರಕಾರಿ, ದಿನಸಿ, ಹಾಲು, ಮೊಸರು ತರುವ ಜವಾಬ್ದಾರಿ ನನ್ನದು.

ಅದೊಂದು ದಿನ ಐದಕ್ಕೇ ಎದ್ದು ಕಾರು ತೆಗೆದುಕೊಂಡು ಚೆಕ್‌ಪೋಸ್ಟ್‌ಗೆ ಹೊರಟೆ. ಕಾರಿನಲ್ಲಿ ನಾನು, ಡ್ರೈವರ್‌ ಇಬ್ಬರೇ. ಮೂರ್ನಾಲ್ಕು ಕಿಲೋ ಮೀಟರ್ ಹೋಗುತ್ತಿದ್ದಂತೆ ಡ್ರೈವರ್‌ ಕಾರಿನ ಬ್ರೇಕ್ ಒತ್ತಿದ. ಎದುರಿಗೆ ಏಳೆಂಟು ಆನೆಗಳ ಹಿಂಡು! ಡ್ರೈವರ್‌ ಬ್ರೇಕ್ ಒತ್ತುದ್ದಿದ್ದಂತೆ ಹಿಂಡಿನಲ್ಲಿದ್ದ ಪುಟಾಣಿ ಆನೆಯೊಂದು ಕಾರಿನ ಬಳಿ ಓಡಿ ಬರಬೇಕೆ? ಅದರ ಹಿಂದೆಯೇ ಘೀಳಿಡುತ್ತಾ ದೊಡ್ಡ ಆನೆಗಳು ದಾಳಿಯಿಟ್ಟವು. ಕಾರಿನಿಂದ ಧುಮುಕಿದ ನಾವು ಕಾಡಿನೊಳಗೆ ದಿಕ್ಕಾಪಾಲಾಗಿ ಓಡಿದೆವು. ಕಲ್ಲು, ಮುಳ್ಳು ಲೆಕ್ಕಿಸದೆ ಒಂದೇ ಸ್ಪೀಡ್‌ನಲ್ಲಿ ಓಡಿ ಪ್ರವಾಸಿ ಮಂದಿರ ಸೇರಿಕೊಂಡಿದ್ದೆವು. ನನಗೆ ಈಗಲೂ ನೆನಪಿದೆ. ಪ್ರವಾಸಿ ಮಂದಿರ ಸೇರಿಕೊಂಡ ನಾನು ಒಂದಷ್ಟು ಹೊತ್ತು ನಡುಗುತ್ತಲೇ ಇದ್ದೆ. ಈ ಸಿನಿಮಾ ಸಹವಾಸವೇ ಬೇಡವೆಂದು ನಿರ್ಧರಿಸಿ ವಾಪಸು ನಾಟಕ ಕಂಪನಿಗೆ ಹೊರಟು ನಿಂತಿದ್ದೆ. ನಿರ್ಮಾಪಕರು ಸಮಾಧಾನಪಡಿಸಿ ಉಳಿಸಿಕೊಂಡರು.

ಮತ್ತಷ್ಟು ಸೋಜಿಗ

ಜನಪ್ರಿಯ ಪೋಸ್ಟ್ ಗಳು

ಬಾಲಣ್ಣ ನೆರವಿಗೆ ಬಂದರು…

ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ ಬಾಲಕೃಷ್ಣ ಅವರೊಂದಿಗೆ ಚಿತ್ರವೊಂದರಲ್ಲಿ ನಟಿಸುವ ಪುಟ್ಟ ಅವಕಾಶ ಸಿಕ್ಕಿತ್ತು. ಆಗಿನ್ನೂ ನಾನು ಸಿನಿಮಾಗೆ

ದಾರಿಯುದ್ದಕ್ಕೂ ಜನ ಸೆಲ್ಯೂಟ್ ಹೊಡೆದರು!

ಡಾ.ರಾಜಕುಮಾರ್ ಅಭಿನಯದ `ದ್ರುವತಾರೆ’ ಚಿತ್ರದಲ್ಲಿ ನನಗೆ ಪೊಲೀಸ್‌ ಇನ್‍ಸ್ಪೆಕ್ಟರ್ ಪಾತ್ರವಿತ್ತು. ಕೆಂಗೇರಿ ಮತ್ತು ರಾಮನಗರ ಮಧ್ಯೆಯಿದ್ದ ಗ್ರಾಮವೊಂದರಲ್ಲಿ ಶೂಟಿಂಗ್. ಈ