ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಮೀಸೆ ಕಾಣದಂತೆ ಟೇಪ್ ಅಂಟಿಸಬಹುದು!

ಪೋಸ್ಟ್ ಶೇರ್ ಮಾಡಿ
ಗಿರಿಜಾ ಲೋಕೇಶ್‌
ನಟಿ

ನಿರ್ದೇಶಕರು ಹೆಚ್ಚು ಅವಧಿಯ ಶಾಟ್‍ಗಳನ್ನು ಚಿತ್ರಿಸುತ್ತಿದ್ದರೆ ನಿರ್ಮಾಪಕರು ಕೈಕೈ ಹಿಸುಕಿಕೊಳ್ಳುತ್ತಿದ್ದರು. ರೀಲ್‍ಗಳು ಪೋಲಾಗುತ್ತವೆಂದು ಕೆಲವು ಬಾರಿ ಆ ನಿರ್ಮಾಪಕ ಕ್ಯಾಮರಾಗೆ ಅಡ್ಡ ಬಂದು ಬಿಡುತ್ತಿದ್ದ!

ಸಿನಿಮಾರಂಗದಲ್ಲಿ ವಿಚಿತ್ರ ಜನ, ವಿಶಿಷ್ಟ ಸಂದರ್ಭಗಳು ಎದುರಾಗಿವೆ. ಅಂಥದ್ದೊಂದು ಸನ್ನಿವೇಶವನ್ನಿಲ್ಲಿ ನೆನಪು ಮಾಡಿಕೊಳ್ಳಬಹುದು. ಸಿನಿಮಾ ಬಗ್ಗೆ ಹೆಚ್ಚೇನೂ ಅನುಭವವಿಲ್ಲದ ಕೆಲವರು ಚಿತ್ರವೊಂದನ್ನು (ಚಿತ್ರದ ಹೆಸರು ಬೇಡ) ಮಾಡುವುದೆಂದು ನಿರ್ಧರಿಸಿದ್ದರು. ಅವರ ಉತ್ಸಾಹ ನೋಡಿ ನಾನು ಹಾಗೂ ಪತಿ ಲೋಕೇಶ್ ಇಬ್ಬರೂ ಚಿತ್ರದಲ್ಲಿ ನಟಿಸುತ್ತೇವೆಂದು ಹೇಳಿದ್ದೆವು. ಆರಂಭದಲ್ಲಿ ಲೋಕೇಶ್ ಅಭಿನಯದ ಸನ್ನಿವೇಶಗಳು ಇರಲಿಲ್ಲವಾದ್ದರಿಂದ ಅವರು ಬಂದಿರಲಿಲ್ಲ.

ಮಂಡ್ಯ ಬಳಿಯ ಗ್ರಾಮವೊಂದರಲ್ಲಿ ಶೂಟಿಂಗ್. ಅಲ್ಲಿ ಕಲಾವಿದರ ಊಟೋಪಚಾರಕ್ಕೆ ಯಾವುದೇ ಸೌಲಭ್ಯ ಒದಗಿಸಿರಲಿಲ್ಲ. ಬೆಳಗ್ಗೆ ತಿಂಡಿ ಹಾಗೂ ಮಧ್ಯಾಹ್ನ, ರಾತ್ರಿ ಊಟಕ್ಕೆ ಗ್ರಾಮದ ಒಂದೊಂದು ಮನೆ ಗೊತ್ತು ಪಡಿಸುತ್ತಿದ್ದರು! ದೂರವಿದ್ದರೂ ನಡೆದೇ ಹೋಗಬೇಕಿತ್ತು. ನಡೆಯಲು ಸಾಧ್ಯವಾಗೋಲ್ಲ ಅಂದಾಗ ಎತ್ತಿನ ಗಾಡಿಯೊಂದರ ವ್ಯವಸ್ಥೆ ಮಾಡಿದ್ದರು. ನಾವು ಊಟಕ್ಕೆಂದು ಹೋದ ಕೆಲವು ಮನೆಗಳಲ್ಲಿ, `ಇನ್ನೂ ಅಡುಗೆ ಸಿದ್ಧವಾಗಿಲ್ಲ’ ಎನ್ನುತ್ತಿದ್ದರು! ಮುಜುಗರವಾದರೂ ಏನೂ ಮಾಡುವಂತಿರಲಿಲ್ಲ.

ಇನ್ನು ಶೂಟಿಂಗ್ ಸಮಯದಲ್ಲೂ ವಿಚಿತ್ರಗಳು ಘಟಿಸುತ್ತಿದ್ದವು. ನಿರ್ಮಾಪಕರ ಜಿಪುಣತನ ನೋಡಿ ನಮಗೆ ಸಾಕುಸಾಕಾಗಿ ಹೋಗಿತ್ತು. ನಿರ್ದೇಶಕರು ಹೆಚ್ಚು ಅವಧಿಯ ಶಾಟ್‍ಗಳನ್ನು ಚಿತ್ರಿಸುತ್ತಿದ್ದರೆ ನಿರ್ಮಾಪಕರು ಕೈಕೈ ಹಿಸುಕಿಕೊಳ್ಳುತ್ತಿದ್ದರು. ರೀಲ್‍ಗಳು ಪೋಲಾಗುತ್ತವೆಂದು ಕೆಲವು ಬಾರಿ ಆ ನಿರ್ಮಾಪಕ ಕ್ಯಾಮರಾಗೆ ಅಡ್ಡ ಬಂದು ಬಿಡುತ್ತಿದ್ದ! ಅಂತಿಮ ದಿನಗಳ ಚಿತ್ರೀಕರಣಗಳಿಗೆಂದು ಲೋಕೇಶ್ ಬಂದರು. `ನಮ್ಮ ಚಿತ್ರಕ್ಕೆ ನೀವು ಮೀಸೆ ತೆಗೆಯಬೇಕು’ ಎಂದು ನಿರ್ದೇಶಕರು ಪಟ್ಟು ಹಿಡಿದರು. `ನಾನೀಗ ಬೇರೆ ಚಿತ್ರವೊಂದರಲ್ಲಿ (ಕ್ಷೀರಸಾಗರ) ನಟಿಸುತ್ತಿದ್ದೇನೆ. ಅಲ್ಲಿ ಕಂಟಿನ್ಯೂಟಿಗೆ ತೊಂದರೆಯಾಗುತ್ತೆ. ನಿಮಗೆ ಬೇರೆ ದಿನ ಡೇಟ್ ಕೊಡಬಹುದಾ?’ ಎಂದು ಲೋಕೇಶ್ ಕೇಳಿದರು. `ಬೇರೆ ದಿನ ಯಾಕೆ ಸಾರ್? ಒಂದು ಕೆಲಸ ಮಾಡಿ, ಮೀಸೆ ಕಾಣದಂತೆ ಟೇಪ್ ಅಂಟಿಸಿಕೊಂಡು ನಮ್ಮ ಚಿತ್ರದಲ್ಲಿ ಅಭಿನಯಿಸಿ’ ಎಂದಿದ್ದರು ನಿರ್ಮಾಪಕರು! ಅವರ ಮಾತಿಗೆ ಅಳಬೇಕೋ, ನಗಬೇಕೋ ನಮಗೆ ತಿಳಿಯಲಿಲ್ಲ! ನಮ್ಮ ಅದೃಷ್ಟಕ್ಕೆ ಈ ಚಿತ್ರ ತೆರೆಕಾಣಲಿಲ್ಲ.

ಲೋಕೇಶ್‌ – ಗಿರಿಜಾ ದಂಪತಿ (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ಮತ್ತಷ್ಟು ಸೋಜಿಗ

ಜನಪ್ರಿಯ ಪೋಸ್ಟ್ ಗಳು

ಅರೆ ನೀವು, ಒಳಗೆ ಮಲಗಿದ್ರಲ್ವಾ?

ನಾಲ್ಕು ಹೆಜ್ಜೆ ಹಾಕುತ್ತಿದ್ದಂತೆ ಅವರಿಗಲ್ಲಿ ನಾನು ಎದುರಾದೆ! `ಅರೆ ನೀವು, ಒಳಗೆ ಮಲಗಿದ್ರಲ್ವಾ?’ ಎಂದು ಗಾಬರಿಯಿಂದ ಕೇಳಿದರು. `ಸಾರ್, ನಾನು

ಸರಿಯಾಗಿ ಚಾಮರ ಬೀಸೋಕೂ ಬರೋಲ್ವೆ?

ಸೀನ್ ಕಂಟ್ಯೂನಿಟಿಗೆ ತೊಂದರೆಯಾಯ್ತು. ನಿರ್ದೇಶಕರು ಬೇಡಿಕೊಂಡರೂ ಸಖಿಯ ಕೋಪ ತಣ್ಣಗಾಗಲಿಲ್ಲ. ಕ್ಯಾಮರಾಮನ್ ಖುದ್ದಾಗಿ ಬಂದು ಕ್ಷಮೆಯಾಚಿಸುವವರೆಗೂ ಬರೋಲ್ಲ ಎಂದು ಆಕೆ

ನಾನ್ಯಾವಾಗ ನಿಮ್ ಸೆರಗು ತಗೊಂಡೆ!?

ಅತಿ ಹೆಚ್ಚು ಸಿನಿಮಾಗಳಲ್ಲಿ ಡಾ.ರಾಜಕುಮಾರ್ ಅವರಿಗೆ ನಾಯಕಿಯಾದ ಹೆಗ್ಗಳಿಕೆ ಜಯಂತಿ ಅವರದು. ‘ದೇವರು ಕೊಟ್ಟ ತಂಗಿ’ ಸಿನಿಮಾ ಚಿತ್ರೀಕರಣದಲ್ಲಿನ ತಮಾಷೆಯೊಂದನ್ನು