ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ನಮ್ಮ ಹೆಣ್ಮಕ್ಳಿಗೆ ಹುಡುಗರನ್ನ ಹುಡುಕಿ ಕೊಡಿ!

ಪೋಸ್ಟ್ ಶೇರ್ ಮಾಡಿ
ಸಿ.ವಿ.ಶಿವಶಂಕರ್‌
ಚಿತ್ರಸಾಹಿತಿ, ನಿರ್ದೇಶಕ

`ಅಯ್ಯೋ, ನಾನು ಸಿನಿಮಾದಲ್ಲಷ್ಟೇ ಬ್ರೋಕರ್ ಎಂದು ಅವರಿಗೆ ಹೇಳಿಬಿಡಪ್ಪ. ಅವರು ನನ್ನ ನಂಬಿಕೊಂಡು ಹಾಳಾಗೋದು ಬೇಡ!’ ಎಂದು ನೊಂದುಕೊಂಡರು ಬಾಲಣ್ಣ.

`ಕನ್ಯಾದಾನ’ ಚಿತ್ರದಲ್ಲಿ ಬಾಲಣ್ಣ, `ಬ್ರೋಕರ್ ಸೀತಾರಾಮಯ್ಯ’ ಪಾತ್ರ ಮಾಡಿದ್ದರು. ಸೂಕ್ತ ವಧು – ವರರನ್ನು ಹುಡುಕಿ ಮದುವೆ ಮಾಡಿಸುವ ಬ್ರೋಕರ್ ಪಾತ್ರ ಜನಪ್ರಿಯವಾಗಿತ್ತು. ಇದೇ ಸಮಯದಲ್ಲಿ ಬಾಲಣ್ಣನವರು ತಮ್ಮೂರು ಅರಸೀಕೆರೆಗೊಮ್ಮೆ ಭೇಟಿ ನೀಡಿದ್ದರು. ಊರಿನ ಹಿರಿಯರೊಬ್ಬರು ಬಾಲಣ್ಣನನ್ನು ತಮ್ಮ ಮನೆಗೆ ಊಟಕ್ಕೆ ಕರೆದಿದ್ದರು. ಒಳ್ಳೆಯ ಊಟ ಹಾಕಿ ತಟ್ಟೆಯೊಂದರಲ್ಲಿ ಹಣ್ಣು-ಕಾಯಿ, ಐವತ್ತು ರೂಪಾಯಿ ದಕ್ಷಿಣೆ ಇಟ್ಟು ಬಾಲಣ್ಣನವರಿಗೆ ಕೊಟ್ಟು ಹೇಳಿದರು – `ನಮ್ಮ ಮನೆಯಲ್ಲಿ ಬೆಳೆದು ನಿಂತ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ದಯಮಾಡಿ ತಾವು ಅವರಿಗೆ ಒಳ್ಳೆಯ ಹುಡುಗರನ್ನು ಹುಡುಕಿಕೊಡಬೇಕು!’

ಶ್ರವಣದೋಷವಿದ್ದ ಬಾಲಣ್ಣನವರಿಗೆ ಹಿರಿಯರು ಹೇಳಿದ್ದೇನೆಂದು ಸರಿಯಾಗಿ ಗೊತ್ತಾಗಲಿಲ್ಲ. `ಕನ್ಯಾರತ್ನ’ ಚಿತ್ರದ ತಮ್ಮ ಅಭಿನಯ ಮೆಚ್ಚಿ ಮಾತನಾಡುತ್ತಿದ್ದಾರೆಂದು ಭಾವಿಸಿ, `ಸರಿ ಸರಿ’ ಎನ್ನುತ್ತಾ ಹೊರನಡೆದರು. ಅವರ ಹಿಂದೆಯೇ ಬಂದ ಹಿರಿಯರು ತಮ್ಮ ಹೆಣ್ಣುಮಕ್ಕಳ ಜಾತಕಗಳನ್ನು ಬಾಲಣ್ಣನವರ ಕೈಗಿತ್ತರು. `ಇದೇನಿದು’ ಎಂದು ಬಾಲಣ್ಣ ನನ್ನ ಮುಖ ನೋಡಿದರು! ನಾನು ಸನ್ನಿವೇಶ ವಿವರಿಸಿದೆ. `ಅಯ್ಯೋ, ನಾನು ಸಿನಿಮಾದಲ್ಲಷ್ಟೇ ಬ್ರೋಕರ್ ಎಂದು ಅವರಿಗೆ ಹೇಳಿಬಿಡಪ್ಪ. ಅವರು ನನ್ನ ನಂಬಿಕೊಂಡು ಹಾಳಾಗೋದು ಬೇಡ!’ ಎಂದು ನೊಂದುಕೊಂಡರು ಬಾಲಣ್ಣ.

ಮತ್ತಷ್ಟು ಸೋಜಿಗ

ಜನಪ್ರಿಯ ಪೋಸ್ಟ್ ಗಳು

ಮೀಸೆ ಕಾಣದಂತೆ ಟೇಪ್ ಅಂಟಿಸಬಹುದು!

ನಿರ್ದೇಶಕರು ಹೆಚ್ಚು ಅವಧಿಯ ಶಾಟ್‍ಗಳನ್ನು ಚಿತ್ರಿಸುತ್ತಿದ್ದರೆ ನಿರ್ಮಾಪಕರು ಕೈಕೈ ಹಿಸುಕಿಕೊಳ್ಳುತ್ತಿದ್ದರು. ರೀಲ್‍ಗಳು ಪೋಲಾಗುತ್ತವೆಂದು ಕೆಲವು ಬಾರಿ ಆ ನಿರ್ಮಾಪಕ ಕ್ಯಾಮರಾಗೆ

ಅರೆ ನೀವು, ಒಳಗೆ ಮಲಗಿದ್ರಲ್ವಾ?

ನಾಲ್ಕು ಹೆಜ್ಜೆ ಹಾಕುತ್ತಿದ್ದಂತೆ ಅವರಿಗಲ್ಲಿ ನಾನು ಎದುರಾದೆ! `ಅರೆ ನೀವು, ಒಳಗೆ ಮಲಗಿದ್ರಲ್ವಾ?’ ಎಂದು ಗಾಬರಿಯಿಂದ ಕೇಳಿದರು. `ಸಾರ್, ನಾನು