ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ನಾನ್ಯಾವಾಗ ನಿಮ್ ಸೆರಗು ತಗೊಂಡೆ!?

ಪೋಸ್ಟ್ ಶೇರ್ ಮಾಡಿ
ಜಯಂತಿ
ನಟಿ

ಅತಿ ಹೆಚ್ಚು ಸಿನಿಮಾಗಳಲ್ಲಿ ಡಾ.ರಾಜಕುಮಾರ್ ಅವರಿಗೆ ನಾಯಕಿಯಾದ ಹೆಗ್ಗಳಿಕೆ ಜಯಂತಿ ಅವರದು. ‘ದೇವರು ಕೊಟ್ಟ ತಂಗಿ’ ಸಿನಿಮಾ ಚಿತ್ರೀಕರಣದಲ್ಲಿನ ತಮಾಷೆಯೊಂದನ್ನು ಜಯಂತಿ ಇಲ್ಲಿ ಸ್ಮರಿಸಿಕೊಂಡಿದ್ದಾರೆ.

‘ದೇವರು ಕೊಟ್ಟ ತಂಗಿ’ ಸಿನಿಮಾ ಶೂಟಿಂಗ್ ಸಂದರ್ಭ. ಟೇಕ್‍ಗೆ ಮುನ್ನ ನಾನು ನನ್ನ ಪಾಲಿನ ಸಂಭಾಷಣೆ ಓದಿಕೊಂಡೆ. ಆ ಸನ್ನಿವೇಶದಲ್ಲಿ ರಾಜ್‍ಗೆ ಉದ್ದನೆಯ ಡೈಲಾಗ್‍ಗಳಿದ್ದವು. ಅವರು ಒಂದೆಡೆ ನಿಂತು ಕೈಬೆರಳು ಆಡಿಸುತ್ತಾ ಏಕಾಗ್ರತೆಯಿಂದ ಸಂಭಾಷಣೆ ಮನನ ಮಾಡಿಕೊಳ್ಳುತ್ತಿದ್ದರು. ಅವರನ್ನೇ ಗಮನಿಸುತ್ತಿದ್ದ ನನಗೆ ಕೀಟಲೆ ಮಾಡಬೇಕೆನಿಸಿತು. ನಿಧಾನವಾಗಿ ಅವರ ಪಕ್ಕಕ್ಕೆ ಸರಿದು, ನನ್ನ ಸೀರೆ ಸೆರಗಿನ ಚುಂಗನ್ನು ಅವರ ಕೈಗೆ ಕೊಟ್ಟೆ! ರಾಜ್‍ಗೆ ಇದ್ಯಾವುದರ ಪರಿವೆಯೇ ಇರಲಿಲ್ಲ. ಸೀರೆ ಸೆರಗಿನ ಚುಂಗನ್ನು ಹಿಡಿದುಕೊಂಡೇ ಅವರು ತಮ್ಮ ಪಾಡಿಗೆ ತಾವು ಡೈಲಾಗ್‍ನಲ್ಲಿ ಮುಳುಗಿದರು!

ಏಳೆಂಟು ನಿಮಿಷಗಳ ನಂತರ, ‘ರಾಜ್ ನಾನು ಕುಳಿತುಕೊಳ್ಳಬೇಕು’ ಎಂದೆ. ‘ಯಾಕೆ, ಏನಾಯ್ತು? ಇಷ್ಟು ಹೊತ್ತು ಏಕೆ ನಿಂತೇ ಇದ್ದಿರಿ, ಕುಳಿತುಕೊಳ್ಳಿ’ ಎಂದರು. ‘ಹೇಗೆ ಕುಳಿತುಕೊಳ್ಳೋದು? ನೀವು ನನ್ನ ಸೆರಗಿನ ಚುಂಗನ್ನು ಬಿಟ್ಟರೆ ತಾನೇ!?’ ಎಂದೆ. ಒಮ್ಮೆಗೇ ಬೆಚ್ಚಿ ಪಟಕ್ಕನೆ ಸೆರಗು ಬಿಟ್ಟ ಅವರು, ‘ಅರೆ, ನಾನ್ಯಾವಾಗ ನಿಮ್ ಸೆರಗು ತಗೊಂಡೆ?’ ಎಂದು ಗಾಬರಿಯಾದರು. ‘ನೀವು ತಗೊಂಡಿಲ್ಲ. ನಾನೇ ನಿಮ್ಮ ಕೈಗೆ ಕೊಟ್ಟೆ’ ಎಂದು ನಕ್ಕೆ. ‘ಓಹ್, ನಿಮ್ದೊಳ್ಳೇ ತಮಾಷೆ ಆಯ್ತಲ್ಲ…’ ಎಂದು ನಕ್ಕರು ರಾಜ್‌.

(ಫೋಟೊ ಕೃಪೆ: ಡಿ.ಸಿ.ನಾಗೇಶ್‌)

ಮತ್ತಷ್ಟು ಸೋಜಿಗ

ಜನಪ್ರಿಯ ಪೋಸ್ಟ್ ಗಳು

ಟೀ ಕುಡಿಯುತ್ತಿದ್ದ ಆನೆ!

(ಫೋಟೊ – ಬರಹ: ಪ್ರಗತಿ ಅಶ್ವತ್ಥ ನಾರಾಯಣ) ವನ್ಯಜೀವಿಗಳು ಮತ್ತು ಮಾನವನ ಮಧ್ಯೆಯ ಸ್ನೇಹ, ಬಾಂಧವ್ಯದ ಕುರಿತ ಹಲವು ಕತೆಗಳು

ಅರೆ ನೀವು, ಒಳಗೆ ಮಲಗಿದ್ರಲ್ವಾ?

ನಾಲ್ಕು ಹೆಜ್ಜೆ ಹಾಕುತ್ತಿದ್ದಂತೆ ಅವರಿಗಲ್ಲಿ ನಾನು ಎದುರಾದೆ! `ಅರೆ ನೀವು, ಒಳಗೆ ಮಲಗಿದ್ರಲ್ವಾ?’ ಎಂದು ಗಾಬರಿಯಿಂದ ಕೇಳಿದರು. `ಸಾರ್, ನಾನು