ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಕುವೆಂಪು ಗೀತೆ – ಎಸ್ಪಿಬಿ ಗಾಯನ

ಮದ್ರಾಸಿನ ರೇವತಿ ಸ್ಟುಡಿಯೋದಲ್ಲಿ ‘ಅನಿರೀಕ್ಷಿತ’ ಚಿತ್ರದ ಹಾಡಿನ ಧ್ವನಿಮುದ್ರಣದ (1969) ಸಂದರ್ಭ. ಸಾಹಿತಿ ಕುವೆಂಪು ವಿರಚಿತ ‘ಸೊಬಗಿನ ಸೆರೆಮನೆಯಾಗಿಹೆ ನೀನು’ ಗೀತೆಯನ್ನು ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಹಾಡಿದ ಕ್ಷಣ. ಆಗ ಎಸ್‌ಪಿಬಿ ಅವರಿಗೆ 23 ವರ್ಷ. ಸಂಗೀತ ಸಂಯೋಜಕ ವಿಜಯಭಾಸ್ಕರ್‌, ‘ಅನಿರೀಕ್ಷಿತ’ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕ ನಾಗೇಶ್ ಬಾಬ ಅವರು ಫೋಟೋದಲ್ಲಿದ್ದಾರೆ. ಇಂದು ಎಸ್ಪಿಬಿ (04/06/1946 – 25/09/2020) ಸಂಸ್ಮರಣಾ ದಿನ. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

Share this post