
ನಟಿ
ನನ್ನನ್ನು ಪ್ರಭಾವಿಸಿದ ಐದು ಸಿನಿಮಾ ಪಾತ್ರಗಳು
ಅನು (ಲಕ್ಷ್ಮಿ) : ಪಲ್ಲವಿ ಅನು ಪಲ್ಲವಿ, 1983 | ಒಂಟಿತನವನ್ನು ಬಹಳ ಲವಲವಿಕೆಯಿಂದ ಕಳೆಯುತ್ತಿರುವ ಹಾಗೆ ಕಂಡರೂ ತನ್ನ ಗಂಡಿನ ಸಾಂಗತ್ಯವನ್ನೇ ಬಯಸುವ ಹೆಣ್ಣು. ತುಂಬಾ ಪ್ರಾಕ್ಟಿಕಲ್ ಪಾತ್ರ. ತನ್ನ ತಾಪತ್ರಯಗಳನ್ನು ಮತ್ತೊಬ್ಬರ ಎದುರು ತೋರಿಸಿಕೊಳ್ಳದ ದಿಟ್ಟ ಹೆಣ್ಣುಮಗಳಾಗಿ ಲಕ್ಷ್ಮೀ ಮನೋಜ್ಞವಾಗಿ ನಟಿಸಿದ್ದಾರೆ. ವೀಣಾ ಹೇಮಂತ್ (ಸುಹಾಸಿನಿ) : ಅಮೃತ ವರ್ಷಿಣಿ, 1997 | ಸಣ್ಣ ಪುಟ್ಟ ವಿಷಯಗಳನ್ನೂ ಎಂಜಾಯ್ ಮಾಡುವ ಭಾವುಕ ವ್ಯಕ್ತಿತ್ವದ ಕ್ರಿಯಾಶೀಲ ಗೃಹಿಣಿ. ಹಾಡು, ಅಡುಗೆ, ಓದು, ಪದ್ಯ, ಹುಡುಗಾಟ ಅಂತೆಲ್ಲ ಸದಾ ಲವಲವಿಕೆಯಿಂದ ಜೀವಿಸುವ ಈ ಪಾತ್ರ. ದುಃಖ ಇದ್ದರೂ ಅಳುಮುಂಜಿಯಂತೆ ವರ್ತಿಸುವುದಿಲ್ಲ. ಸೋನುಬಾಯಿ (ಸ್ಮಿತಾ ಪಟೇಲ್) : ಮಿರ್ಚ್ ಮಸಾಲಾ, 1987 | ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳ ಮೇಲಿನ ದಬ್ಬಾಳಿಕೆ, ಉಳ್ಳ ಪುರುಷನ ಕೀಳುನೋಟದಿಂದ ರೊಚ್ಚಿಗೆದ್ದು ಯಾರಿಗೂ ಅಂಜದೆ ಸಿಡಿದು ನಿಲ್ಲುವ ಪಾತ್ರ. ಈಕೆಯ ನಡೆ, ನುಡಿ, ವ್ಯಕ್ತಿತ್ವದಿಂದ ಮತ್ತಷ್ಟು ಸ್ವಾಭಿಮಾನಿ ಹೆಣ್ಣುಮಕ್ಕಳು ಸಿಡಿದು ನಿಲ್ಲುತ್ತಾರೆ. ಪೂಜಾ ಮಲ್ಹೋತ್ರಾ (ಶಬಾನಾ ಅಜ್ಮಿ) : ಅರ್ಥ್, 1982 | ಗಂಡನೇ ಸರ್ವಸ್ವ ಎನ್ನುತ್ತಾ ಮನೆ, ಅಲಂಕಾರ ಅಂತೆಲ್ಲಾ ಕನಸುಗಳನ್ನು ಹೊತ್ತ ಒಬ್ಬ ಗೃಹಿಣಿ. ತನ್ನ ನಿಲುವು, ನಂಬಿಕೆಗಳಂತೆ ಪತಿ ಇಲ್ಲ ಎಂದು ಗೊತ್ತಾಗುತ್ತಿದ್ದಂತೆ ಸ ಎಲ್ಲವನ್ನೂ ಬಿಟ್ಟು ಸ್ವಾವಲಂಬಿಯಾಗುವ, ಗಂಡಸಿನ ಸಾಂಗತ್ಯಕ್ಕಿಂತ ಇನ್ನೇನೋ ಇದ್ದರೆ ಸಾಕು ಬದುಕು ಸಾಗಿಸಲು ಎಂಬುದನ್ನು ತೋರಿಸುವ ಈ ಪಾತ್ರ ಮನಮೋಹಕ. ವಿಜು ಪ್ರಸಾದ್ (ಫಹಾದ್ ಫಾಝಿಲ್) : ಟ್ರಾನ್ಜ್, 2020 | ಸಾವು, ನೋವು, ಬಡತನಗಳ ಮದ್ಯೆ ಒಂದು ಬದುಕು. ಆ ಬದುಕು ಕಟ್ಟಿಕೊಳ್ಳಲು ಹಲವಾರು ಹಾದಿ…ಆ ಹಾದಿಯ ಹುಡುಕಾಟದಲ್ಲಿ ಸಿಗುವ ಅವಕಾಶ, ಆ ಅವಕಾಶದ ಉಳಿವಿಗಾಗಿ ಶ್ರಮ.. ಇವೆಲ್ಲದರ ಮದ್ಯೆ ಆಗುವ ಮೋಸ, ಅದರಿಂದ ಆಚೆ ಬರುವಲ್ಲಿನ ಹಾದಿ… ಪ್ರತೀ ಹಂತದಲ್ಲೂ ನಮ್ಮನ್ನು ನಾವು ಆ ಪಾತ್ರದಲ್ಲಿ ಕಾಣುತ್ತೇವೆ.