
ಲೇಖಕಿ
ನನ್ನ ನೆಚ್ಚಿನ ಮೂರು ಸಿನಿಮಾ ಸನ್ನಿವೇಶಗಳು
ದ ಪರ್ಸೂಟ್ ಆಫ್ ಹ್ಯಾಪಿನೆಸ್ (2006) : ಬದುಕಿನಲ್ಲಿ ಎಂತಹ ಸಂಕಷ್ಟವೇ ಬಂದರೂ ಪರಿಶ್ರಮದಿಂದ ಮತ್ತು ಭರವಸೆಯನ್ನು ಕಳೆದುಕೊಳ್ಳದಿರುವುದರಿಂದ ಎದುರಿಸಬಹುದು ಎಂದು ತೋರಿಸುವ ಚಿತ್ರ ‘ದ ಪರ್ಸೂಟ್ ಆಫ್ ಹ್ಯಾಪಿನೆಸ್’. ಅಧಿಕಾರಿಗಳು ಕೆಲಸ ಸಿಕ್ಕಿದೆ ನಿನಗೆ ಎಂದಾಗಿನ ಅನೂಹ್ಯ ಆನಂದವನ್ನು ವಿಲ್ ಸ್ಮಿತ್ ಕೊನೆಯ ದೃಶ್ಯದಲ್ಲಿ ಅದ್ಭುತವಾಗಿ ಅಭಿನಯಿಸಿದ್ದಾರೆ. ದ ಪ್ರೆಸ್ಟೀಜ್ (2006) : ಕ್ರಿಸ್ಟೋಫರ್ ನೋಲನ್ ನಿರ್ದೇಶನದ ‘ದ ಪ್ರೆಸ್ಟೀಜ್’ ಸಿನಿಮಾದಲ್ಲಿ ಆಂಜಿಯರ್ ಮತ್ತು ಬೋರ್ಡನ್ ಇಂದ್ರಜಾಲದಲ್ಲಿ ಕಟ್ಟಾ ಪ್ರತಿಸ್ಪರ್ಧಿಗಳು. ಒಬ್ಬರನ್ನೊಬ್ಬರು ಮೀರಿಸುವ ಹುಕಿಗೆ ಬಿದ್ದು ಇಬ್ಬರಿಗೂ ಪರಸ್ಪರರು ಕಳೆದುಕೊಂಡದ್ದು ಏನು ಎಂಬುದು ಗೊತ್ತಾಗುವ ಏಳು ನಿಮಿಷದ ಕೊನೆಯ ದೃಶ್ಯ ಮರೆಯಲಾರದ್ದು. ಕ್ರಿಶ್ಚಿಯನ್ ಬೇಲ್ ಮತ್ತು ಜ್ಯಾಕ್ಮನ್ ನಟರು. ಬ್ಲಡ್ ಡೈಮಂಡ್ (2006) : ಉಗ್ರಗಾಮಿಗಳಿಂದ ಅಪಹರಣಕ್ಕೊಳಗಾಗಿ ಎಳೆಯ ಮನಸ್ಸಿನಲ್ಲಿ ಹಿಂಸೆಯನ್ನೇ ತುಂಬಿಕೊಂಡಿರುವ ತನ್ನ ಮಗನನ್ನು ತಂದೆ ಮತ್ತೆ ನಾಗರಿಕ ಲೋಕಕ್ಕೆ ತರಲು ಪ್ರಯತ್ನಿಸಿ ಯಶಸ್ವಿಯಾಗುವ ಮನಮಿಡಿಯುವ ದೃಶ್ಯ ‘ಬ್ಲಡ್ ಡೈಮಂಡ್’ ಚಿತ್ರದಲ್ಲಿದೆ. ಈ ದೃಶ್ಯದಲ್ಲಿ ಮಾತ್ರವಲ್ಲ, ಇಡೀ ಸಿನಿಮಾದಲ್ಲೇ ನಟ Djimon Hounsou ಅವರದ್ದು ಅತ್ಯುತ್ಕೃಷ್ಟ ನಟನೆ. Leonardo DiCaprio ನನ್ನ ಪ್ರೀತಿಯ ನಟನಾದರೂ ಈ ಚಿತ್ರದಲ್ಲಿ ಈ ದ್ರಶ್ಯವನ್ನೇ ನಾನು ಆಯ್ಕೆ ಮಾಡುವಷ್ಟು.