
ನಿರ್ದೇಶಕ, ನಿರ್ಮಾಪಕ
ನನ್ನನ್ನು ಪ್ರಭಾವಿಸಿದ ಐದು ಸಿನಿಮಾಗಳು
ಶೋಲೆ (1975, ಹಿಂದಿ) – ಈ ಸಿನಿಮಾದಲ್ಲಿ ಪ್ರತಿಯೊಂದೂ ಪರ್ಫೆಕ್ಟ್ ಆಗಿದೆ ಅಂತ ನನಗೆ ಅನಿಸುತ್ತದೆ. ಕಾಮಿಡಿ, ಆಕ್ಷನ್, ಸ್ಟೋರಿ, ಎಮೋಷನ್, ಕಲಾವಿದರ ಆಯ್ಕೆ, ಸಂಗೀತ… ಪ್ರತಿಯೊಂದೂ ಸರಿಯಾದ ಪ್ರಮಾಣದಲ್ಲಿದೆ ಅಂತ ನನಗೆ ಅನ್ನಿಸುತ್ತದೆ. ಬಂಗಾರದ ಮನುಷ್ಯ (1972, ಕನ್ನಡ) – ಗ್ರಾಮೀಣ ಜೀವನ, ಅದರಲ್ಲೂ ರೈತಾಪಿ ಜನರ ಬದುಕನ್ನು ಮನಮುಟ್ಟುವಂತೆ ತೋರಿಸಿದ ಸಿನಿಮಾ. ಕೃಷಿ ಬಗ್ಗೆ ಒಲವು ಮೂಡುವಂತೆ ಮಾಡುವುದರ ಜೊತೆಗೆ ಆದರ್ಶಗಳನ್ನು ಪ್ರತಿಪಾದಿಸುವ ರಾಜಕುಮಾರರ ‘ರಾಜೀವ’ ಪಾತ್ರ ಮನಸ್ಸಿನಲ್ಲುಳಿಯುತ್ತದೆ. ರೋಜಾ (1992, ತಮಿಳು) – ನಿರ್ದೇಶಕ ಮಣಿರತ್ನಂರ ಆಕರ್ಷಕ ನಿರೂಪಣೆಯಿಂದಾಗಿ ಸಿನಿಮಾ ಪರಿಣಾಮಕಾರಿಯಾಗಿದೆ. ವಿಶೇಷವಾಗಿ ಹಿನ್ನೆಲೆ ಸಂಗೀತ ನನಗೆ ತುಂಬಾ ಇಷ್ಟ. ನಾಯಗನ್ (1987, ತಮಿಳು) – ಮಣಿರತ್ನಂ ನಿರ್ದೇಶನದ ಚಿತ್ರಕ್ಕೆ ‘ಗಾಡ್ಫಾದರ್’ ಇಂಗ್ಲಿಷ್ ಸಿನಿಮಾದ ಸ್ಫೂರ್ತಿ ಇರಬಹುದು. ಅವರು ಇಲ್ಲಿನ ನೇಟಿವಿಟಿಗೆ ಒಗ್ಗಿಸಿ ನಿರೂಪಿಸಿರುವ ಶೈಲಿ ಪರಿಣಾಮಕಾರಿಯಾಗಿದೆ. ದಿ ಶಾಶಂಕ್ ರಿಡಮ್ಶನ್ (1994, ಇಂಗ್ಲಿಷ್) – ಫ್ರ್ಯಾಂಕ್ ಡರಾಬೋಂಟ್ ನಿರ್ದೇಶನದ ಈ ಸಿನಿಮಾ ಅಚ್ಚುಕಟ್ಟಾದ ಮೇಕಿಂಗ್ನಿಂದಾಗಿ ನನಗಿಷ್ಟವಾಗುತ್ತದೆ. ಉತ್ತಮ ಕತೆ ಮತ್ತು ಕತೆಯನ್ನು ಪ್ರಸೆಂಟ್ ಮಾಡಿರುವ ರೀತಿಯಿಂದಾಗಿ ಪ್ರೇಕ್ಷಕರನ್ನು ಹಿಡಿದಿಡುತ್ತದೆ.