ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಶಬಾನಾ ಅಜ್ಮಿ – 71

ಶ್ಯಾಂ ಬೆನಗಲ್ ನಿರ್ದೇಶನದ ‘ಅಂಕುರ್‌’ (1974) ಹಿಂದಿ ಚಿತ್ರದಲ್ಲಿ ಅನಂತನಾಗ್ ಮತ್ತು ಶಬಾನಾ ಅಜ್ಮಿ. ಭಾರತೀಯ ಚಿತ್ರರಂಗ ಕಂಡ ಪ್ರತಿಭಾವಂತ ನಟಿ ಶಬಾನಾ. ಅವರ ತಂದೆ ಕೈಫಿ ಆಜ್ಮಿ ಜನಮನ್ನಣೆ ಪಡೆದ ಉರ್ದು ಕವಿ. ತಾಯಿ ಶೌಕತ್ ಖ್ಯಾತ ರಂಗಭೂಮಿ ಕಲಾವಿದೆ. ಮುಖ್ಯವಾಹಿನಿ ಹಾಗೂ ಹೊಸ ಅಲೆಯ ಚಿತ್ರಗಳ ಭಿನ್ನ ಪಾತ್ರಗಳನ್ನು ಪೋಷಿಸಿದ್ದಾರೆ ಶಬಾನಾ. ಪುಣೆಯ ಫಿಲ್ಮ್ ಮತ್ತು ಟೆಲಿವಿಷನ್ ಇನ್‌ಸ್ಟಿಟ್ಯೂಟ್‌ನಲ್ಲಿ ಕಲಿತ ಅವರು ಮೊದಲ ಸಿನಿಮಾ ‘ಅಂಕುರ್‌’ (1974) ಉತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದರು. ಪದ್ಮಭೂಷಣ ಪುರಸ್ಕೃತ ನಟಿ ಶ್ರೇಷ್ಠ ನಟನೆಗೆ ಐದು ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಇಂದು (ಸೆ. 18) ಶಬಾನಾ ಅವರ 71ನೇ ಹುಟ್ಟುಹಬ್ಬ. (Photo Courtesy : Movies N Memories)

Share this post