ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಅಕ್ಕಿನೇನಿ ನಾಗೇಶ್ವರರಾವ್‌ ನೆನಪು

ತಾಪಿ ಚಾಣಕ್ಯ ನಿರ್ದೇಶನದ ‘ರೋಜುಲು ಮಾರಾಯಿ’ (1955) ತೆಲುಗು ಚಿತ್ರದಲ್ಲಿ ಅಕ್ಕಿನೇನಿ ನಾಗೇಶ್ವರರಾವ್‌ ಮತ್ತು ಸಾವುಕಾರ್ ಜಾನಕಿ. ತೆಲುಗು ಚಿತ್ರರಂಗದ ಮೇರು ನಟ ಅಕ್ಕಿನೇನಿ ನಾಗೇಶ್ವರರಾವ್. ಭಾರತೀಯ ಸಿನಿಮಾ ಸಂದರ್ಭದಲ್ಲೇ ಪ್ರಮುಖ ನಾಯಕನಟರಾಗಿ ಅವರನ್ನು ಗುರುತಿಸಲಾಗುತ್ತದೆ. ಏಳು ದಶಕಗಳ ವೃತ್ತಿ ಬದುಕಿನಲ್ಲಿ ಅವರ ಹೆಸರಿನಲ್ಲಿ ಹಲವಾರು ಮಹತ್ವದ ಚಿತ್ರಗಳು ದಾಖಲಾಗಿವೆ. ಹತ್ತಾರು ತಮಿಳು ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಪದ್ಮಭೂಷಣ ಪುರಸ್ಕೃತ ಎಎನ್‌ಆರ್‌ ಅವರಿಗೆ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಗೌರವ ಸಂದಿದೆ. ಇಂದು ಅಕ್ಕಿನೇನಿ ನಾಗೇಶ್ವರ ರಾವ್ (20/09/1923 – 22/01/2014) ಅವರ ಜನ್ಮದಿನ. (Photo Coutresy: Telugu Cinema History)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು