ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಜಿ.ಕೆ.ವೆಂಕಟೇಶ್ – ಸಿ.ಅಶ್ವಥ್

ಮದರಾಸಿನ ಸ್ಟುಡಿಯೋವೊಂದರಲ್ಲಿ ‘ಕೂಡಿ ಬಾಳೋಣ’ (1975) ಕನ್ನಡ ಸಿನಿಮಾ ಹಾಡಿನ ಧ್ವನಿಮುದ್ರಣ ಸಂದರ್ಭ. ಸಂಗೀತ ಸಂಯೋಜಕ ಜಿ.ಕೆ.ವೆಂಕಟೇಶ್‌ ಮತ್ತು ಗಾಯಕ ಸಿ.ಅಶ್ವಥ್ ಇದ್ದಾರೆ. ಅರವತ್ತು, ಎಪ್ಪತ್ತರ ದಶಕಗಳಲ್ಲಿ ಮಧುರ ಕನ್ನಡ ಚಿತ್ರಗೀತೆಗಳನ್ನು ಸಂಯೋಜಿಸಿದ ಮೇರು ಸಂಗೀತ ನಿರ್ದೇಶಕರು ಜಿ.ಕೆ.ವೆಂಕಟೇಶ್‌. ಕನ್ನಡ ಸಿನಿಮಾಗಳಲ್ಲಿ ಪಾಶ್ಚಿಮಾತ್ಯ ಹಿನ್ನೆಲೆ ಸಂಗೀತದ ಯಶಸ್ವೀ ಪ್ರಯೋಗ ನಡೆಸಿದವರು. ಪ್ರಮುಖವಾಗಿ ಕನ್ನಡ ಸೇರಿದಂತೆ ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳಿಗೂ ಸಂಗೀತ ಸಂಯೋಜಿಸಿದ್ದಾರೆ. ಇಂದು ಜಿ.ಕೆ.ವೆಂಕಟೇಶ್ (21/09/1927 – 17/11/1993) ಅವರ ಜನ್ಮದಿನ. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

Share this post