ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಪಡೋಸನ್

ನಟ ಮೆಹಮೂದ್ ನಿರ್ಮಾಣ, ಜ್ಯೋತಿ ಸ್ವರೂಪ್ ನಿರ್ದೇಶನದ ‘ಪಡೋಸನ್‌’ (1968) ಮ್ಯೂಸಿಕಲ್ ಕಾಮಿಡಿ ಚಿತ್ರದಲ್ಲಿ ಸುನೀಲ್‌ ದತ್‌ ಮತ್ತು ಕಿಶೋರ್ ಕುಮಾರ್‌. ‘ಪಶೇರ್ ಬರಿ’ (1952) ಬೆಂಗಾಲಿ ಚಿತ್ರದ ರಿಮೇಕಿದು. ಸಾಯಿರಾ ಬಾನು ನಾಯಕಿಯಾಗಿ ನಟಿಸಿದ್ದು, ಮೆಹಮೂದ್‌ ದಕ್ಷಿಣ ಭಾರತದ ಸಂಗೀತ ನಿರ್ದೇಶಕನ ಪಾತ್ರದಲ್ಲಿದ್ದಾರೆ. ಆರ್‌.ಡಿ.ಬರ್ಮನ್ ಸಂಗೀತ ಸಂಯೋಜನೆಯ ಸಿನಿಮಾ ದೊಡ್ಡ ಯಶಸ್ಸು ಕಂಡಿತು. ಹಿಂದಿ ಚಿತ್ರರಂಗ ಕಂಡ ಯಶಸ್ವೀ ನಾಯಕನಟ, ನಿರ್ಮಾಪಕ ಸುನೀಲ್ ದತ್‌ ಅವರ ಜನ್ಮದಿನವಿಂದು (ಜೂನ್‌ 6). (Photo Courtesy: Film History Pics)

Share this post