ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಸಂಗೀತ ಸಂಯೋಜಕ ರಾಮ್‌ಲಕ್ಷ್ಮಣ್‌

ಬಾಲಿವುಡ್‌ನ ಸಂಗೀತ ಸಂಯೋಜಕ ರಾಮ್‌ಲಕ್ಷ್ಮಣ್‌ (78 ವರ್ಷ) ನಿನ್ನೆ (ಮೇ 22) ಅಗಲಿದ್ದಾರೆ. ಅವರ ಜನ್ಮನಾಮ ವಿಜಯ್ ಪಾಟೀಲ್‌. ‘ಏಜೆಂಟ್‌ ವಿನೋದ್‌’ (1977) ಅವರ ಸಂಗೀತ ಸಂಯೋಜನೆಯ ಮೊದಲ ಸಿನಿಮಾ. ‘ಮೈನೇ ಪ್ಯಾರ್ ಕಿಯಾ’, ‘ಹಮ್ ಆಪ್ಕೆ ಹೈ ಕೌನ್‌’, ‘ಹಮ್ ಸಾಥ್ ಸಾಥ್ ಹೈ’ ಸೇರಿದಂತೆ ಹತ್ತಾರು ಸೂಪರ್‌ಹಿಟ್‌ ಚಿತ್ರಗಳಿಗೆ ರಾಮ್‌ಲಕ್ಷ್ಮಣ್ ಸಂಗೀತವಿದೆ. ಹಿಂದಿ, ಮರಾಠಿ ಮತ್ತು ಭೋಜ್‌ಪುರಿ ಭಾಷೆಯಲ್ಲಿ ಒಟ್ಟು 75ಕ್ಕೂ ಹೆಚ್ಚು ಚಿತ್ರಗಳಿಗೆ ಅವರು ಸಂಗೀತ ಸಂಯೋಜಿಸಿದ್ದಾರೆ. (Photo Courtesy: Filmfare)

Share this post