ಆರ್.ನಾಗೇಂದ್ರ ರಾವ್ ಕತೆ, ಚಿತ್ರಕಥೆ, ಸಂಭಾಷಣೆ, ಗೀತೆಗಳನ್ನು ರಚಿಸಿ ನಿರ್ದೇಶಿಸಿದ ‘ಮಹಾತ್ಮಾ ಕಬೀರ್’ (1947) ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ಎಂ.ವಿ. ಸುಬ್ಬಯ್ಯನಾಯ್ಡು. ಕನ್ನಡದ ಮೊದಲ ವಾಕ್ಚಿತ್ರ ‘ಸತಿ ಸುಲೋಚನ’ದ (1934) ನಾಯಕನಟ ಸುಬ್ಬಯ್ಯನಾಯ್ಡು. 30ರ ದಶಕದಲ್ಲಿ ಅವರು ಜನಪ್ರಿಯ ರಂಗಭೂಮಿ ತಾರೆ. ಅವರ ಇತರೆ ಪ್ರಮುಖ ಚಿತ್ರಗಳು ‘ವಸಂತಸೇನಾ’, ‘ಸತ್ಯ ಹರಿಶ್ಚಂದ್ರ’, ‘ಭಕ್ತ ಪ್ರಹ್ಲಾದ’. ‘ಭೂಕೈಲಾಸ’ (1940) ತೆಲುಗು ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಅಭಿನಯಿಸಿದ್ದರು. ಸುಬ್ಬಯ್ಯನಾಯ್ಡು (1896 – 21/07/1962) ಅವರು ಅಗಲಿದ ದಿನವಿದು. (ಫೋಟೊ ಕೃಪೆ: ‘ವಿಜಯಚಿತ್ರ’ ವಿಶೇಷ ಸಂಚಿಕೆ)

ಮಹಾತ್ಮಾ ಕಬೀರ್
- ಕನ್ನಡ ಸಿನಿಮಾ
Share this post