ಎನ್.ಟಿ.ರಾಮರಾವು ಚಿತ್ರಕಥೆ ರಚಿಸಿ ನಿರ್ಮಿಸಿ, ನಿರ್ದೇಶಿಸಿದ ‘ಚಾಣಕ್ಯ ಚಂದ್ರಗುಪ್ತ’ (1977) ತೆಲುಗು ಚಿತ್ರದಲ್ಲಿ ಶಿವಾಜಿ ಗಣೇಶನ್, ಎ.ಎನ್.ನಾಗೇಶ್ವರ ರಾವ್, ಎನ್.ಟಿ.ರಾಮರಾವು. ಭಾರತೀಯ ಸಿನಿಮಾ ಸಂದರ್ಭದಲ್ಲೇ ಶಿವಾಜಿ ಗಣೇಶನ್ ಪ್ರಮುಖ ನಾಯಕನಟ. ತಮಿಳು ಚಿತ್ರರಂಗದ ದಂತಕತೆ. ಪ್ರಮುಖವಾಗಿ ತಮಿಳು ಸಿನಿಮಾ, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಯ 280ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ದಾದಾ ಸಾಹೇಬ್ ಫಾಲ್ಕೆ ಪುರಸ್ಕೃತ ಮೇರು ನಟ ಶಿವಾಜಿ ಗಣೇಶನ್ (01/10/1928 – 21/07/2001) ಅಗಲಿದ ದಿನವಿದು.
ಚಾಣಕ್ಯ ಚಂದ್ರಗುಪ್ತ
- ಬಹುಭಾಷಾ ಸಿನಿಮಾ
Share this post






