ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ನಿರ್ಮಾಪಕ ಕೆ.ಸಿ.ಎನ್.ಚಂದ್ರಶೇಖರ್

ಶಿವಗಂಗೆ ಬಳಿ ಹುಣಸೂರು ಕೃಷ್ಣಮೂರ್ತಿ ನಿರ್ದೇಶನದ ‘ಭಕ್ತ ಜ್ಞಾನದೇವ’ (1982) ಚಿತ್ರೀಕರಣ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕ ಕೆ.ಸಿ.ಎನ್‌.ಚಂದ್ರಶೇಖರ್‌. ಕನ್ನಡ ಚಿತ್ರನಿರ್ಮಾಣ, ವಿತರಣೆ, ಪ್ರದರ್ಶಕ ವಲಯದಲ್ಲಿ ಕೆಸಿಎನ್‌ ಕುಟುಂಬದ್ದು ಸುಮಾರು ಆರೇಳು ದಶಕಗಳ ಒಡನಾಟ. ಕೆ.ಸಿ.ಎನ್‌ ಸಂಸ್ಥೆಯಡಿ 40ಕ್ಕೂ ಹೆಚ್ಚು ಚಿತ್ರಗಳು ತಯಾರಾಗಿದ್ದು, ಹಲವಾರು ಚಿತ್ರಗಳಿಗೆ ಅವರು ಹಣಕಾಸಿನ ನೆರವು ನೀಡಿದ್ದಾರೆ. ಕುಟುಂಬದ ಹಿರಿಯರಾದ ಕೆ.ಸಿ.ಎನ್‌.ಚಂದ್ರಶೇಖರ್ (69 ವರ್ಷ) ನಿನ್ನೆ (ಜೂನ್‌ 13) ತಡರಾತ್ರಿ ಇಹಲೋಕ ತ್ಯಜಿಸಿದ್ದಾರೆ. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

Share this post