ಸಾಹಿತಿ, ಪತ್ರಕರ್ತ ಪಿ.ಲಂಕೇಶ್ ಚೊಚ್ಚಲ ನಿರ್ದೇಶನ – ನಿರ್ಮಾಣದ ‘ಪಲ್ಲವಿ’ (1976) ಚಿತ್ರದಲ್ಲಿ ವಿಮಲಾನಾಯ್ಡು. ಇದು ಪಿ.ಲಂಕೇಶರ ‘ಬಿರುಕು’ (1967) ಕಾದಂಬರಿ ಆಧರಿಸಿದ ಪ್ರಯೋಗ. ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ ಮತ್ತು ಅತ್ಯುತ್ತಮ ನಿರ್ದೇಶನ… ರಾಷ್ಟ್ರಪ್ರಶಸ್ತಿಗಳಿಗೆ ಸಿನಿಮಾ ಭಾಜನವಾಗಿದೆ. ಅತ್ಯುತ್ತಮ ಸಿನಿಮಾ, ನಿರ್ದೇಶನ, ಚಿತ್ರಕಥೆ, ಸಂಭಾಷಣೆ ಮತ್ತು ಸಂಗೀತ (ರಾಜೀವ್ ತಾರಾನಾಥ್) ಐದು ರಾಜ್ಯಪ್ರಶಸ್ತಿಗಳು ಸಂದಿವೆ. ವಿಮಲಾ ನಾಯ್ಡು, ಟಿ.ಎನ್.ಸೀತಾರಾಂ ಮತ್ತು ಪಿ.ಲಂಕೇಶ್ ಮುಖ್ಯಪಾತ್ರಗಳಲ್ಲಿ ನಟಿಸಿದ್ದರು. ಚಿತ್ರಕ್ಕೆ ಎಸ್.ರಾಮಚಂದ್ರ ಅವರ ಛಾಯಾಗ್ರಹಣವಿದೆ.

ಪಲ್ಲವಿ – 1976
- ಕನ್ನಡ ಸಿನಿಮಾ
Share this post