ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಹಿಂದಿ ತಾರೆ ಶ್ಯಾಮ

50-60ರ ದಶಕಗಳ ಜನಪ್ರಿಯ ಹಿಂದಿ ತಾರೆ ಶ್ಯಾಮ. ಅವರ ಜನ್ಮನಾಮ ಖುರ್ಷಿದ್ ಅಖ್ತರ್‌. ಗುರುದತ್‌ ನಿರ್ದೇಶನದ ‘ಆರ್ ಪಾರ್‌’, ‘ಬರ್ಸಾತ್‌ ಕಿ ರಾತ್‌’, ‘ತಾರಾನಾ’, ‘ಮಿಲನ್‌’, ‘ಮಿರ್ಜಾ ಸಾಯಿಬಾ’, ‘ಶಾರದಾ’ ಅವರ ಕೆಲವು ಪ್ರಮುಖ ಚಿತ್ರಗಳು. 50ರ ದಶಕದ ಬೇಡಿಕೆಯ ನಟಿಯಾಗಿದ್ದರು ಶ್ಯಾಮ. 1952ರಿಂದ 60ರ ಅವಧಿಯಲ್ಲಿ ಅವರು 80 ಚಿತ್ರಗಳಲ್ಲಿ ನಟಿಸಿದ್ದರು. 1954ರಲ್ಲಿ ಅವರು ನಟಿಸಿದ 14 ಸಿನಿಮಾ, 1955ರಲ್ಲಿ 13 ಸಿನಿಮಾಗಳು ತೆರೆಕಂಡಿದ್ದವು. ಒಟ್ಟಾರೆ 140ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಖ್ಯಾತ ಹಿಂದಿ ಸಿನಿಮಾ ಛಾಯಾಗ್ರಾಹಕ ಫಾಲಿ ಮಿಸ್ತ್ರಿ ಅವರು ಶ್ಯಾಮ ಪತಿ. ಇಂದು (ಜೂನ್‌ 07) ಶ್ಯಾಮ (07/06/1935 – 14/11/2017) ಜನ್ಮದಿನ. (Photo Courtesy: Film History Pics)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು