ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಹಾಡೊಮ್ಮೆ ಹಾಡಬೇಕು…

ಸಾಹಿತಿ, ಸ್ವಾತಂತ್ರ್ಯ ಹೋರಾಟಗಾರ ಕಯ್ಯಾರ ಕಿಯ್ಞಣ್ಣ ರೈ ಅವರು ‘ಪಡುವಾರಹಳ್ಳಿ ಪಾಂಡವರು’ (1978) ಚಿತ್ರಕ್ಕೆ ಮೂರು ಹಾಡುಗಳನ್ನು ರಚಿಸಿದ್ದಾರೆ. ಬೆಂಗಳೂರು ಜಯಮಹಲ್‌ ಹೋಟೆಲ್‌ನಲ್ಲಿ ಸಂಗೀತ ಸಂಯೋಜಕ ವಿಜಯಭಾಸ್ಕರ್‌ ಅವರ ಟ್ಯೂನ್‌ಗೆ ಹಾಡುಗಳನ್ನು ಬರೆದ ಸಂದರ್ಭವಿದು. ನಿರ್ದೇಶಕ ಪುಟ್ಟಣ್ಣ ಕಣಗಾಲ್ ಇದ್ದಾರೆ. ಚಿತ್ರದಲ್ಲಿನ ‘ಸಾವಿರ ಸಾವಿರ’, ‘ಹಾಡೊಮ್ಮೆ ಹಾಡಬೇಕು’ ಮತ್ತು ‘ಬಹಿಷ್ಕಾರ ಬಹಿಷ್ಕಾರ’ ಕಿಯ್ಞಣ್ಣ ರೈ ಅವರ ರಚನೆಗಳು. ‘ನಾನೆಲ್ಲೋ ನಾಡಿನ ಮೂಲೆಯಲ್ಲಿದ್ದ. ಇವೆಲ್ಲಾ ನನಗೆ ಬರೋಲ್ಲ ಎಂದರೂ ಪುಟ್ಟಣ್ಣನವರು ಕೇಳಲಿಲ್ಲ. ಕರೆದುಕೊಂಡು ಬಂದು ಹಾಡುಗಳನ್ನು ಬರೆಸಿದರು..” ಎಂದು ಸಂದರ್ಶನವೊಂದರಲ್ಲಿ ಕಿಯ್ಞಣ್ಣ ರೈ (08/06/1915 – 09/08/2015) ಹೇಳಿಕೊಂಡಿದ್ದರು. ಇಂದು ಅವರ ಜನ್ಮದಿನ. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು