ಲೇಖ್ ಟಂಡನ್ ನಿರ್ದೇಶನದ ‘ಝುಕ್ ಗಯಾ ಆಸ್ಮಾನ್’ (1968) ಹಿಂದಿ ಚಿತ್ರದಲ್ಲಿ ನಟರಾದ ರಾಜೇಂದ್ರನಾಥ್ ಮತ್ತು ರಾಜೇಂದ್ರಕುಮಾರ್. ಹಿಂದಿ ಮತ್ತು ಪಂಚಾಬಿ ಚಿತ್ರರಂಗದ ಜನಪ್ರಿಯ ಹಾಸ್ಯನಟ ರಾಜೇಂದ್ರನಾಥ್. ನಟ – ನಿರ್ದೇಶಕ ಪ್ರೇಮ್ ನಾಥ್ ಇವರ ಹಿರಿಯ ಸಹೋದರ. ‘ಪೃಥ್ವಿ ಥಿಯೇಟರ್’ ನಾಟಕಗಳಲ್ಲಿ ಅಭಿನಯಿಸಿ ನಂತರ ಸಿನಿಮಾ ಪ್ರವೇಶಿಸಿದ ರಾಜೇಂದ್ರನಾಥ್ ಹಿಂದಿ ಮತ್ತು ಪಂಚಾಬಿ ಭಾಷೆಯ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನೇಪಾಲಿ ಭಾಷೆಯ ಮೊದಲ ಸಿನಿಮಾ ‘ಮೈತಿಘರ್’ನಲ್ಲಿ ರಾಜೇಂದ್ರನಾಥ್ (08/06/1931 – 13/02/2008) ನಟಿಸಿದ್ದಾರೆ. ಇಂದು ಅವರ ಜನ್ಮದಿನ. (Photo Courtesy: Bollywoodirect)

ನಟ ರಾಜೇಂದ್ರನಾಥ್ ನೆನಪು
- ಹಿಂದಿ ಸಿನಿಮಾ
Share this post