ದೊರೈ-ಭಗವಾನ್ ನಿರ್ಮಾಣ, ನಿರ್ದೇಶನದ ‘ಬಯಲುದಾರಿ’ (1976) ಚಿತ್ರದ ಹಾಡಿನ ಧ್ವನಿಮುದ್ರಣ ಕಾರ್ಯಕ್ಕೆ ಚಾಲನೆ ನೀಡಿದ ಸಂದರ್ಭ. ಚಿತ್ರನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಮುಖ್ಯಅತಿಥಿಯಾಗಿ ಪಾಲ್ಗೊಂಡಿದ್ದರು. ವರನಟ ರಾಜಕುಮಾರ್ ಅವರ ತಾಯಿ ಲಕ್ಷ್ಮಮ್ಮ, ಪುತ್ರ ಲೋಹಿತ್ (ಪುನೀತ್ ರಾಜಕುಮಾರ್) ಇದ್ದಾರೆ. ಭಾರತಿಸುತ ಕಾದಂಬರಿ ಆಧಾರಿತ ‘ಬಯಲುದಾರಿ’ ಚಿತ್ರಕ್ಕೆ ರಾಜನ್-ನಾಗೇಂದ್ರ ಸಂಗೀತ ಸಂಯೋಜನೆ, ಚಿ.ಉದಯಶಂಕರ್ ಸಂಭಾಷಣೆ, ಆರ್.ಚಿಟ್ಟಿಬಾಬು ಛಾಯಾಗ್ರಹಣ, ಪಿ.ಭಕ್ತವತ್ಸಲಂ ಸಂಕಲವಿದೆ. ದೊಡ್ಡ ಯಶಸ್ಸು ಕಂಡ ಸಿನಿಮಾ ಅನಂತನಾಗ್ ನಟನಾ ಬದುಕಿಗೆ ಮಹತ್ವದ ತಿರುವು ನೀಡಿತು. (ಫೋಟೊ ಕೃಪೆ: ‘ವಿಜಯಚಿತ್ರ’ ಪತ್ರಿಕೆ, ಮಲ್ಲಿಕಾರ್ಜುನ ಮೇಟಿ)

ಬಯಲುದಾರಿ – ಪುಟಾಣಿ ಪುನೀತ್
- ಕನ್ನಡ ಸಿನಿಮಾ
Share this post