ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಕಲ್ಯಾಣ್‌ಜೀ ನೆನಪು

ಹಾಡಿನ ಧ್ವನಿಮುದ್ರಣದಲ್ಲಿ ಆನಂದ್‌ಜೀ, ಗಾಯಕ ಮೊಹಮ್ಮದ್ ರಫಿ, ಕಲ್ಯಾಣ್‌ಜೀ. ಹಿಂದಿ ಚಿತ್ರರಂಗದ ಖ್ಯಾತ ಸಂಗೀತ ಸಂಯೋಜಕ ಸಹೋದರರು ಕಲ್ಯಾಣ್‌ಜೀ – ಆನಂದ್‌ಜೀ. ನಾಲ್ಕೂವರೆ ದಶಕಗಳ ವೃತ್ತಿ ಬದುಕಿನಲ್ಲಿ ಅವರು 200ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಇವರ ಸಂಯೋಜನೆಯಲ್ಲಿ ಮೊಹಮ್ಮದ್‌ ರಫಿ, ಲತಾ ಮಂಗೇಶ್ಕರ್‌, ಕಿಶೋರ್ ಕುಮಾರ್, ಆಶಾ ಬೋಸ್ಲೆ, ಮನ್ನಾ ಡೇ, ಮುಖೇಶ್‌, ಮಹೇಂದ್ರ ಕುಮಾರ್ ಹಾಡಿರುವ ನೂರಾರು ಗೀತೆಗಳು ಇಂದಿಗೂ ಜನಮಾನಸದಲ್ಲಿ ನೆಲೆಯಾಗಿವೆ. ‘ಸರಸ್ವತಿಚಂದ್ರ’ (1968) ಚಿತ್ರದ ಅತ್ಯುತ್ತಮ ಸಂಗೀತ ಸಂಯೋಜನೆಯಾಗಿ ಕಲ್ಯಾಣ್‌ಜೀ – ಆನಂದ್‌ಜೀ ರಾಷ್ಟ್ರಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಪದ್ಮಶ್ರೀ ಗೌರವ ಸಂದಿದೆ. ಈ ಜೋಡಿಯಲ್ಲಿನ ಹಿರಿಯ ಸಹೋದರ ಕಲ್ಯಾಣ್‌ಜೀ (30/06/1928 – 24/08/2000) ಅವರ ಜನ್ಮದಿನವಿಂದು. (Photo Courtesy: Film History Pics)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು