ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಶಿವ್ – ಹರಿ ಸಂಗೀತ

ಯಶ್ ಚೋಪ್ರಾ ನಿರ್ಮಾಣ, ನಿರ್ದೇಶನದ ‘ಸಿಲ್ಸಿಲಾ’ (1981) ಹಿಂದಿ ಚಿತ್ರದ ಹಾಡಿನ ಧ್ವನಿಮುದ್ರಣ ಸಂದರ್ಭದಲ್ಲಿ ಯಶ್ ಚೋಪ್ರಾ, ಪಂಡಿತ್ ಶಿವಕುಮಾರ್ ಶರ್ಮಾ, ನಟ ಅಮಿತಾಭ್ ಬಚ್ಚನ್‌ ಮತ್ತು ಪಂಡಿತ್ ಹರಿಪ್ರಸಾದ್ ಚೌರಾಸಿಯಾ. ಖ್ಯಾತ ಶಾಸ್ತ್ರೀಯ ಸಂಗೀತಗಾರರಾದ ಶಿವಕುಮಾರ್ ಶರ್ಮಾ ಮತ್ತು ಹರಿಪ್ರಸಾದ್ ಚೌರಾಸಿಯಾ, ‘ಶಿವ್ – ಹರಿ’ ಹೆಸರಿನೊಂದಿಗೆ ಸಿಲ್ಸಿಲಾ, ಫಾಸ್ಲೆ, ವಿಜಯ್‌, ಚಾಂದಿನಿ, ಲಮ್ಹೇ, ಪರಂಪರಾ, ಸಾಹಿಬಾ, ಡರ್‌ ಹಿಂದಿ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಅತ್ಯುತ್ತಮ ಸಂಗೀತ ಸಂಯೋಜನೆಗೆ ಮೂರು ಬಾರಿ (ಸಿಲ್ಸಿಲಾ, ಚಾಂದಿನಿ, ಡರ್‌) ಫಿಲ್ಮ್‌ಫೇರ್‌ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ. ಇಂದು (ಜುಲೈ 1) ಹರಿಪ್ರಸಾದ್ ಚೌರಾಸಿಯಾ ಅವರ 83ನೇ ಹುಟ್ಟುಹಬ್ಬ. (Photo Courtesy: Film History Pics)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು