ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಸ್ವಯಂವರಂ

ಅಂತಾರಾಷ್ಟ್ರೀಯ ಖ್ಯಾತಿಯ ಭಾರತೀಯ ನಿರ್ದೇಶಕ ಅಡೂರು ಗೋಪಾಲಕೃಷ್ಣ ಅವರ ‘ಸ್ವಯಂವರಂ’ (1972) ಮಲಯಾಳಂ ಸಿನಿಮಾ ಚಿತ್ರೀಕರಣದ ಸಂದರ್ಭ. ನಿರ್ದೇಶಕ ಅಡೂರು (ಎಡಭಾಗದಲ್ಲಿ ಇರುವವರು) ತಮ್ಮ ಚಿತ್ರತಂಡದ ತಂತ್ರಜ್ಞನಿಂದ ಸಾಗರದ ಅಲೆಗಳ ಶಬ್ಧವನ್ನು ರೆಕಾರ್ಡ್ ಮಾಡಿಸುತ್ತಿದ್ದಾರೆ. ಗೋಪಾಲಕೃಷ್ಣ ಅವರ ಮೊದಲ ಕಥಾಚಿತ್ರ ‘ಸ್ವಯಂವರಂ’ ಅತ್ಯುತ್ತಮ ಪ್ರಾದೇಶಿಕ ಭಾಷಾ ಸಿನಿಮಾ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ನಟಿ (ಶಾರದಾ) ಮತ್ತು ಅತ್ಯುತ್ತಮ ಛಾಯಾಗ್ರಹಣ (ಮಂಕಡ ರವಿವರ್ಮ) ನಾಲ್ಕು ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಪಡೆದಿದೆ. (Photo Courtesy: adoorgopalakrishnan.com)

Share this post