‘ರಾಜಾ ಸತ್ಯವೃತ’ (1961) ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ತಾಯಿ, ನಟಿ ಪ್ರತಿಮಾದೇವಿ ಅವರೊಂದಿಗೆ ವಿಜಯಲಕ್ಷ್ಮೀ ಸಿಂಗ್. ಇದು ವಿಜಯಲಕ್ಷ್ಮೀ ಸಿಂಗ್ ಅವರ ತಂದೆ, ಖ್ಯಾತ ನಿರ್ದೇಶಕ – ನಿರ್ಮಾಪಕ ಡಿ.ಶಂಕರ್‌ಸಿಂಗ್ ಅವರ ನಿರ್ದೇಶನದ ಸಿನಿಮಾ. ಎಂಬತ್ತರ ದಶಕದಲ್ಲಿ ನಾಯಕನಟಿಯಾಗಿ ಅಭಿನಯಿಸಿದ ವಿಜಯಲಕ್ಷ್ಮೀ ಸಿಂಗ್ ‘ಮಳೆ ಬರಲಿ ಮಂಜೂ ಇರಲಿ’ (2009) ಚಿತ್ರದೊಂದಿಗೆ ನಿರ್ದೇಶಕಿಯೂ ಆದರು. ಸ್ವೀಟಿ, ಈ ಬಂಧನ, ಯಾನ… ಅವರ ನಿರ್ದೇಶನದ ಇತರೆ ಚಿತ್ರಗಳು. 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ವಿಜಯಲಕ್ಷ್ಮೀ ಸಿಂಗ್ ಕಿರುತೆರೆಯಲ್ಲೂ ಸಕ್ರಿಯರಾಗಿದ್ದಾರೆ. ಇಂದು (ಜುಲೈ19) ಅವರ 61ನೇ ಹುಟ್ಟುಹಬ್ಬ.

ವಿಜಯಲಕ್ಷ್ಮಿ ಸಿಂಗ್ – 61
- ಕನ್ನಡ ಸಿನಿಮಾ
Share this post