ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಬೆಂಗಳೂರು ಲತಾ

ಹಿನ್ನೆಲೆ ಗಾಯಕಿ
ಪೋಸ್ಟ್ ಶೇರ್ ಮಾಡಿ

ಬೆಂಗಳೂರಿನಲ್ಲಿ ಹುಟ್ಟಿ, ಬೆಳೆದ ಲತಾ ಶಾಲಾ ವಿದ್ಯಾಭ್ಯಾಸದ ಜೊತೆ ಸಂಗೀತಾಭ್ಯಾಸವನ್ನೂ ನಡೆಸಿದ್ದರು. ಚಿಂತನಪಲ್ಲಿ ಕೃಷ್ಣಮೂರ್ತಿ ಅವರ ಸಂಗೀತ ಗುರು. ಹದಿನಾರರ ಹರೆಯದಲ್ಲಿ ವೇದಿಕೆಯಲ್ಲಿ ಹಾಡಲು ಆರಂಭಿಸಿದ್ದರು. ಒಮ್ಮೆ ಪುರಭವನದ ಕಾರ್ಯಕ್ರಮವೊಂದರಲ್ಲಿ ಹಾಡಿದ್ದು ಅವರ ಬದುಕಿಗೆ ತಿರುವಾಯ್ತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಗೀತ ಸಂಯೋಜಕ ಜಿ.ಕೆ.ವೆಂಕಟೇಶ್‌ ತಮ್ಮ ‘ಕಣ್ತೆರೆದು ನೋಡು’ (1961) ಚಿತ್ರಕ್ಕೆ ಲತಾರಿಂದ ಹಾಡಿಸಿದರು. ಸಿನಿಮಾಗೆ ಮೊದಲ ಗೀತೆ ಹಾಡಿದಾಗ ಲತಾಗೆ ಇಪ್ಪತ್ತರ ಹರೆಯ.

ಮುಂದೆ ಸಿನಿಮಾ ಗಾಯನದ ಅವಕಾಶಗಳು ಹೆಚ್ಚುತ್ತಿದ್ದಂತೆ ಮದರಾಸಿನಲ್ಲಿ ನೆಲೆನಿಂತರು. ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಯ ಸಿನಿಮಾಗಳಿಗೆ ಹಾಡಿ ‘ಪಂಚಭಾಷಾ ಗಾಯಕಿ’ಯಾದರು. ಎನ್‌.ಟಿ.ರಾಮರಾವ್‌ ಅವರ ಮೈಲುಗಲ್ಲು ತೆಲುಗು ಸಿನಿಮಾ ‘ನರ್ತನಶಾಲಾ’ ಗಾಯನ ಅವರಿಗೆ ಹೆಸರು ತಂದುಕೊಟ್ಟಿತು. ಚಕ್ರತೀರ್ಥ, ಮಾಲತಿ ಮಾಧವ, ಗಂಗೆ ಗೌರಿ, ಪಾರ್ವತಿ ಕಲ್ಯಾಣ, ಜ್ವಾಲಾಮುಖಿ, ಪತಿಯೇ ದೈವ, ಛಲಗಾರ, ಅಣ್ಣ ತಮ್ಮ, ನಾಂದಿ, ಅದೇ ಕಣ್ಣು, ಧ್ರುವತಾರೆ ಕನ್ನಡ ಚಿತ್ರಗಳು, ಹಿಂದಿಯ ‘ಗುಡಿಯಾ’, ‘ರಾಮದಾಸ್‌’ ಸೇರಿದಂತೆ 400ಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ.

ಘಂಟಸಾಲ, ಟಿ.ಎಂ.ಸೌಂದರರಾಜನ್‌, ಬಾಲಮುರಳಿಕೃಷ್ಣ, ಮಹಮದ್ ರಫಿ, ಮನ್ನಾಡೆ, ಪಿ.ಬಿ.ಶ್ರೀನಿವಾಸ್‌, ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರಂತಹ ಮೇರು ಗಾಯಕರೊಂದಿಗೆ ಲತಾ ಹಾಡಿರುವುದು ವಿಶೇಷ. ಕನ್ನಡ ಚಿತ್ರೋದ್ಯಮ ಮದರಾಸಿನಿಂದ ಬೆಂಗಳೂರಿಗೆ ಬಂದನಂತರ ಲತಾ ಅವರಿಗೆ ಅವಕಾಶಗಳು ಕಡಿಮೆಯಾದವು. ಜೊತೆಗೆ ಕೌಟುಂಬಿಕ ಬದುಕಿನ ಏರುಪೇರುಗಳಿಗೆ ಸಿಲುಕಿದ್ದ ಅವರು ಮಾನಸಿಕ ಒತ್ತಡಕ್ಕೀಡಾಗಿದ್ದರು. 1990ರ ಮಾರ್ಚ್‌ 26ರಂದು ನಿದ್ರೆ ಮಾತ್ರೆ ಸೇವಿಸಿ ಅವರು ಆತ್ಮಹತ್ಯೆ ಮಾಡಿಕೊಂಡು ಇಹಲೋಕ ತ್ಯಜಿಸಿದಾಗ ಅವರಿಗೆ ನಲವತ್ತು ವರ್ಷವಷ್ಟೆ.

(ಮಾಹಿತಿ ಕೃಪೆ: ರುಕ್ಕೋಜಿ ಅವರ ‘ರಾಜಕುಮಾರ್ ಸಮಗ್ರ ಚರಿತ್ರೆ’ ಕೃತಿ)

‘ಧ್ರುವತಾರೆ’ ಚಿತ್ರದಲ್ಲಿ ರಾಜಕುಮಾರ್ ಮತ್ತು ಬೆಂಗಳೂರು ಲತಾ ಗಾಯನದಲ್ಲಿ ‘ಆ ಮೋಡ ಬಾನಲ್ಲಿ ತೇಲಾಡುತ..’

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಭಕ್ತವತ್ಸಲಂ

ಆತ್ಮೀಯರಿಂದ ‘ಭಕ್ತ’ ಎಂದೇ ಕರೆಸಿಕೊಳ್ಳುತ್ತಿದ್ದ ಭಕ್ತವತ್ಸಲಂ ಅವರದ್ದು ವ್ಯಾಕರಣಬದ್ಧ ಸಂಕಲನ. ಸಿನಿಮಾದ ಛಾಯಾಗ್ರಹಣ, ನಿರ್ದೇಶನದಲ್ಲಿ ತಪ್ಪುಗಳಾಗಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ಅವರು ಸಂಬಂಧಿಸಿದವರನ್ನು