ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಫಾರೂಕ್ ಶೇಕ್

ನಟ
ಪೋಸ್ಟ್ ಶೇರ್ ಮಾಡಿ

ಭಾರತೀಯ ಚಿತ್ರರಂಗದ ಹೊಸ ಅಲೆಯ ಸಿನಿಮಾ ಯಾದಿಯಲ್ಲಿ ನಟ ಫಾರೂಕ್ ಶೇಕ್‌ ಹೆಸರು ಪ್ರಮುಖವಾಗಿ ಪ್ರಸ್ತಾಪವಾಗುತ್ತದೆ. ರಂಗಭೂಮಿ, ಸಿನಿಮಾ ಮತ್ತು ಕಿರುತೆರೆ ಕ್ಷೇತ್ರಗಳಲ್ಲಿ ಅವರದ್ದು ಅಪರೂಪದ ಸಾಧನೆ. ಸತ್ಯಜಿತ್ ರೇ, ಸಾಯಿ ಪರಾಂಜಪೆ, ಮುಝಾಫರ್ ಅಲಿ, ಹೃಷಿಕೇಶ್ ಮುಖರ್ಜಿ, ಕೇತನ್ ಮೆಹ್ತಾ ಅವರಂತಹ ಮೇರು ನಿರ್ದೇಶಕರೊಂದಿಗೆ ಫಾರೂಕ್ ಕೆಲಸ ಮಾಡಿದ್ದಾರೆ.

‘ಗರಂ ಹವಾ’ ಚಿತ್ರದಲ್ಲಿ

ಫಾರೂಕ್‌ ಶೇಕ್ ಜನಿಸಿದ್ದು ಗುಜರಾತಿನ ಅಮ್ರೋಲಿಯಲ್ಲಿ. ವಕೀಲರಾಗಿದ್ದ ಅವರ ತಂದೆ ಮುಂಬಯಿಗೆ ಬಂದು ನೆಲೆಸಿದ್ದರು. ಮುಂಬಯಿಯ ಸಿದ್ದಾರ್ಥ ಕಾನೂನು ಕಾಲೇಜಿನಲ್ಲಿ ಪದವಿ ಓದುತ್ತಿರುವಾಗಲೇ ಫಾರೂಕ್‌ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಪದವಿಯ ಕೊನೆಯ ವರ್ಷದಲ್ಲಿ ಓದುತ್ತಿದ್ದಾಗ ನಿರ್ದೇಶಕ ಎಂ.ಎಸ್‌.ಸತ್ಯು ಅವರು ಫಾರೂಕ್‌ಗೆ ತಮ್ಮ ‘ಗರಂ ಹವಾ’ ಚಿತ್ರದ ಪಾತ್ರದಲ್ಲಿ ನಟಿಸುವ ಅವಕಾಶ ಕಲ್ಪಿಸಿದರು. ಭಾರತದ ಮಹತ್ವದ ಸಿನಿಮಾ ‘ಗರಂ ಹವಾ’ ಮೂಲಕ ಫಾರೂಕ್‌ ಸಿನಿಮಾರಂಗದ ನಂಟು ಶುರುವಾಯ್ತು.

ದೀಪ್ತಿ ನವಾಲ್ ಜೊತೆ

ನಾಯಕನಟನಾಗಿ ಅವರ ಮೊದಲ ಸಿನಿಮಾ ‘ಮೇರೆ ಸಾಥ್ ಚಲ್‌’. ಚಿತ್ರದಲ್ಲಿ ಅವರಿಗೆ ಸ್ಮಿತಾ ಪಾಟೀಲ್ ನಾಯಕಿ. ಬೆಳ್ಳಿತೆರೆ ಮೇಲೆ ದೀಪ್ತಿ ನಾವೆಲ್‌ ಮತ್ತು ಫಾರೂಕ್‌ ಅವರದ್ದು ಜನಪ್ರಿಯ ಮತ್ತು ಯಶಸ್ವೀ ಜೋಡಿ. ಕಥಾ, ಸಾಥ್ ಸಾಥ್‌, ಕಿಸ್ಸಿ ಸೇ ನಾ ಕೆಹ್ನಾ, ಲಿಸನ್ ಅಮಯಾ.. ಸೇರಿದಂತೆ ಒಂಬತ್ತು ಚಿತ್ರಗಳಲ್ಲಿ ಇವರು ಜೊತೆಯಾಗಿ ನಟಿಸಿದ್ದಾರೆ. ಮಧ್ಯಮವರ್ಗದ ದಂಪತಿಯನ್ನು ಪ್ರತಿನಿಧಿಸುವ ಈ ಜೋಡಿಯ ಸಿನಿಮಾಗಳು ಸರಳ ನಿರೂಪಣೆ ಮತ್ತು ಇಬ್ಬರ ಆಪ್ತ ನಟನೆಯಿಂದ ಜನಮೆಚ್ಚುಗೆ ಗಳಿಸಿದವು.

‘ತುಮ್ಹಾರಿ ಅಮೃತಾ’ ರಂಗಪ್ರಯೋಗದಲ್ಲಿ ಶಬಾನಾ ಅಜ್ಮಿ ಅವರೊಂದಿಗೆ

ಹೊಸ ಅಲೆಯ ಸಿನಿಮಾಗಳ ಮತ್ತೊಬ್ಬ ಪ್ರಮುಖ ನಟಿ ಶಬಾನಾ ಅಜ್ಮಿ ಜೋಡಿಯಾಗಿಯೂ ಫಾರೂಕ್‌ ಗೆಲುವು ಕಂಡರು. ಈ ಜೋಡಿಯ ಅಂಜುಮಾನ್‌, ಲೋರಿ, ಏಕ್ ಪಲ್‌ ಚಿತ್ರಗಳು ಸಿನಿಪ್ರೇಮಿಗಳ ಮನೆಗೆದ್ದಿವೆ. ರಂಗದ ಮೇಲೆ ಇವರಿಬ್ಬರೂ ನಟಿಸಿದ ‘ತುಮ್ಹಾರಿ ಅಮೃತಾ’ ಅತ್ಯಂತ ಯಶಸ್ವೀ ರಂಗಪ್ರಯೋಗವಾಯ್ತು.

‘ಯೆಹ್‌ ಜವಾನಿ ಹೈ ದಿವಾನಿ’ (2013) ಚಿತ್ರದಲ್ಲಿ

ಕಿರುತೆರೆಯಲ್ಲಿ ಫಾರೂಕ್‌ ನಟಿಸಿದ್ದ ‘ಚಮತ್ಕಾರ್‌’ ಮತ್ತು ‘ಜೀ ಮಂತ್ರೀಜಿ’ ದೊಡ್ಡ ಯಶಸ್ಸು ಕಂಡಿದ್ದವು. ಅವರು ನಡೆಸಿಕೊಟ್ಟ ಟಾಕ್‌ ಶೋ ‘ಜೀನಾ ಇಸೀ ಕಾ ನಾಮ್ ಹೈ’ ಕಿರುತೆರೆಯ ಸಾರ್ವಕಾಲಿಕ ಜನಪ್ರಿಯ ಶೋಗಳಲ್ಲೊಂದಾಗಿ ಪರಿಗಣಿಸಲ್ಪಡುತ್ತದೆ. ‘ಬಿನ್ನಿ ಡಬಲ್‌’ ಮತ್ತು ಕ್ವಿಜ್‌ ರೇಡಿಯೋ ಕಾರ್ಯಕ್ರಮಗಳಲ್ಲೂ ಅವರು ಸಂಚಲನ ಸೃಷ್ಟಿಸಿದ್ದರು. ‘ಲಾಹೋರ್‌’ (2009) ಚಿತ್ರದ ಉತ್ತಮ ನಟನೆಗೆ ಅವರಿಗೆ ಅತ್ಯುತ್ತಮ ಪೋಷಕ ನಟ ರಾಷ್ಟ್ರಪ್ರಶಸ್ತಿ ಸಂದಿದೆ. ‘ಯೆಹ್ ಜವಾನಿ ಹೈ ದಿವಾನಿ’ (2013) ಅವರು ತೆರೆಯ ಮೇಲೆ ಕಾಣಿಸಿಕೊಂಡ ಕೊನೆಯ ಸಿನಿಮಾ.

ಫಾರೂಕ್ ಶೇಕ್‌ | ಜನನ: 25/03/1948 | ನಿಧನ: 28/12/2013

‘ಸಾಥ್‌ ಸಾಥ್‌’ ಚಿತ್ರದ ಜಗ್‌ಜಿತ್ ಸಿಂಗ್ ಹಾಡಿರುವ ಜನಪ್ರಿಯ ಗೀತೆ

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಚಿತ್ರಗೀತೆಗಳ ಹಿಂದಿನ ಕಣ್ಣು ‘ಚಿಟ್ಟಿಬಾಬು’

ಚಿತ್ರಗೀತೆಗಳನ್ನು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ಬೆಳ್ಳಿತೆರೆಯಲ್ಲಿ ಮೂಡಿಸಿದ ಚಿಟ್ಟಿ ಬಾಬು ಅವರಂತಹ ಛಾಯಾಗ್ರಾಹಕರು ಭಾರತೀಯ ಚಿತ್ರರಂಗದಲ್ಲಿಯೇ ಬೆರಳೆಣಿಕೆಯಷ್ಟು. ಇಂದು

ಶಶಿಕಪೂರ್

ಹಿಂದಿ ಚಿತ್ರರಂಗ ಮತ್ತು ರಂಗಭೂಮಿ ದಿಗ್ಗಜ ಪೃಥ್ವೀರಾಜ್ ಕಪೂರ್ ಅವರ ಮೂರನೇ ಪುತ್ರ ಶಶಿಕಪೂರ್. ಕಪೂರ್ ಸಹೋದರರ ಪೈಕಿ ಚಿಕ್ಕವರು.