ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಕ್ಯಾಮರ ಕಣ್ಣಲ್ಲಿ ಲವ್‌ಸ್ಟೋರಿ!

ಪೋಸ್ಟ್ ಶೇರ್ ಮಾಡಿ
ಭಗವಾನ್‌, ನಿರ್ದೇಶಕ

ಎಚ್.ಎಲ್.ಎನ್.ಸಿಂಹ ನಿರ್ದೇಶನದ `ಅಬ್ಬಾ ಆ ಹುಡುಗಿ’ (1959) ಸಿನಿಮಾ ತಯಾರಾಗುತ್ತಿದ್ದ ಸಂದರ್ಭ. ಮದ್ರಾಸ್‍ನ ವಾಹಿನಿ ಸ್ಟುಡಿಯೋದಲ್ಲಿ ಶೂಟಿಂಗ್ ನಡೆಯುತ್ತಿತ್ತು. ನಿರ್ದೇಶಕ ಸಿಂಹ ಅವರಿಗೆ ನಾನು ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದೆ. ದೊರೈರಾಜ್ ಚಿತ್ರದ ಕ್ಯಾಮರಾಮನ್. ಈ ಚಿತ್ರದೊಂದಿಗೆ ರಾಜಾಶಂಕರ್ ಮತ್ತು ಲೀಲಾಂಜಲಿ, ನಾಯಕ – ನಾಯಕಿಯಾಗಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ಆಗಿನ್ನೂ ಛಾಯಾಗ್ರಾಹಣ ಮಾಡುತ್ತಿದ್ದ ದೊರೈ ತಮ್ಮದೇ ಆದ ವಿಶಿಷ್ಟ ಕ್ಯಾಮರಾ ತಂತ್ರಗಳಿಗೆ ಹೆಸರಾಗಿದ್ದರು. ಸ್ಪೆಷಲ್ ಲೈಟಿಂಗ್‍ನಲ್ಲಿ ಅವರು ಸೆರೆಹಿಡಿಯುತ್ತಿದ್ದ ಕ್ಲೋಸ್‍ಅಪ್ ಶಾಟ್‍ಗಳು ಗಮನ ಸೆಳೆಯುತ್ತಿದ್ದವು.

ಚಿತ್ರೀಕರಣ ಆರಂಭವಾಗಿ ಕೆಲವು ದಿನಗಳಾತ್ತಷ್ಟೆ. ಛಾಯಾಗ್ರಾಹಕ ದೊರೈ, ನೂತನ ನಟಿ ಲೀಲಾಂಜಲಿ ಅವರಲ್ಲಿ ಅನುರಕ್ತರಾಗಿದ್ದರು! ಆಗ ಅವರು ನಟಿಯ ಕ್ಲೋಸ್‍ಅಪ್ ಶಾಟ್‍ಗಳನ್ನು ತೆಗೆದದ್ದೇ ತೆಗೆದದ್ದು!  ನಟಿ ಲೀಲಾಂಜಲಿ ಅವರ ಮನೆ ಮದರಾಸಿನ ಪಟೇಲ್ ಸ್ಟ್ರೀಟ್‍ನಲ್ಲಿತ್ತು. ಸಂಜೆ ಶೂಟಿಂಗ್ ಮುಗಿಯುತ್ತಲೇ ದೊರೈ, ಪಟೇಲ್ ಸ್ಟ್ರೀಟ್‍ನತ್ತ ಹೆಜ್ಜೆ ಹಾಕುತ್ತಿದ್ದರು! ಒಂದಷ್ಟು ದಿನ ಈ ಒನ್‍ವೇ ಪ್ರೀತಿ ಹೀಗೇ ಮುಂದುವರೆಯಿತು. ಅದೊಂದು ದಿನ ದೊರೈ ಧೈರ್ಯ ಮಾಡಿ ಲೀಲಾಂಜಲಿ ಅವರಿಗೆ ತಮ್ಮ ಪ್ರೀತಿ ನಿವೇದಿಸಿಕೊಂಡರು. ಮೈಸೂರಿನ ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದವರು ಲೀಲಾಂಜಲಿ. ಅವರಿಗೆ ಕೂಡ ಸಿನಿಮಾದಲ್ಲಿ ಮುಂದುವರೆಯುವುದು ಇಷ್ಟವಿರಲಿಲ್ಲ. ಅಲ್ಲದೆ ದೊರೈಗೆ ಆಗ ಒಳ್ಳೆಯ ಹೆಸರಿತ್ತು. ಒಳ್ಳೆಯ ಘಳಿಗೆಯೊಂದರಲ್ಲಿ ದೊರೈ ಪ್ರೀತಿಯನ್ನು ಲೀಲಾಂಜಲಿ ಒಪ್ಪಿಕೊಂಡರು. ಹಾಗೆ, ಚಿತ್ರೀಕರಣ ಪೂರ್ಣಗೊಳ್ಳುವ ವೇಳೆಗೆ ದೊರೈ ಲವ್‍ಸ್ಟೋರಿಯೂ ಸುಖಾಂತ್ಯಗೊಂಡಿತು.

ಮುಂದೆ ಇವರಿಬ್ಬರಿಗೂ ಮದುವೆ ಮಾಡಿಸಬೇಕಾದ ಜವಾಬ್ದಾರಿ ನಮ್ಮ ಹೆಗಲೇರಿತು. ದೊರೈಗೆ ಮದುವೆ ಮಾಡಿಕೊಳ್ಳುವ ಧೈರ್ಯವೇನೋ ಇತ್ತು. ಆದರೆ ಹಣಕಾಸಿನ ಅನುಕೂಲತೆ ಇರಲಿಲ್ಲ. ಆಗ ನಮಗೆಲ್ಲಾ ಮಾರ್ಗದರ್ಶಕರಾಗಿದ್ದ ನಿರ್ದೇಶಕ ಜಿ.ವಿ.ಅಯ್ಯರ್ ನೆರವಿಗೆ ಧಾವಿಸಿದರು. ಅವರ ನೇತೃತ್ವದಲ್ಲಿ ತಿರುಪತಿಯಲ್ಲಿ ಮದುವೆ ಮಾಡಿಸುವುದೆಂದು ತೀರ್ಮಾನವಾಯ್ತು. ತಿರುಪತಿಯ ಛತ್ರದಲ್ಲಿ ಪುರೋಹಿತರ ಸಮಕ್ಷಮದೊಂದಿಗೆ ದೊರೈ – ಲೀಲಾಂಜಲಿ ವಿವಾಹ ನೆರವೇರಿತು. `ಅಬ್ಬಾ ಆ ಹುಡುಗಿ’, ನಟಿ ಲೀಲಾಂಜಲಿ ಅವರ ಮೊದಲ ಮತ್ತು ಕಡೆಯ ಚಿತ್ರವಾಯ್ತು. ಮುಂದೆ ದೊರೈ – ಲೀಲಾಂಜಲಿ ಆದರ್ಶ ದಂಪತಿಯಾಗಿ ಬಾಳ್ವೆ ನಡೆಸಿದರು.

ಮತ್ತಷ್ಟು ಸೋಜಿಗ

ಜನಪ್ರಿಯ ಪೋಸ್ಟ್ ಗಳು

ಶಶಿ ಸಾಬ್ ಪಕ್ಕ ಕುಳಿತ ರೋಮಾಂಚನ!

ಕನ್ನಡದ ಹಿರಿಯ ಸಿನಿಮಾ ಛಾಯಾಗ್ರಾಹಕ ಬಿ.ಎಸ್‌.ಬಸವರಾಜ್‌ ವೃತ್ತಿಬದುಕಿನ ಆರಂಭದಲ್ಲಿ ಹಿಂದಿ ಚಿತ್ರಗಳಿಗೆ ಕೆಲಸ ಮಾಡಿದ್ದರು. ಆಗೊಮ್ಮೆ ನಟ ಶಶಿಕಪೂರ್‌ ಅವರೊಂದಿಗೆ

ಪ್ರಕಾಶ್ ರೈ ಮೇಷ್ಟ್ರಾಗಿದ್ದು!

ಹಾಗೆ ನೋಡಿದರೆ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದರೂ ಪ್ರಕಾಶನಿಗೂ ಮಲಯಾಳಂ ಸರಿಯಾಗಿ ಗೊತ್ತಿಲ್ಲ. ಆದರೆ ಭಾಷೆಯ ಬಗ್ಗೆ ತಿಳಿವಳಿಕೆ ಇತ್ತಷ್ಟೆ. ನಟಿ

ಡೆಲ್ಲಿ ಪೂರಾ ಸುತ್ನಾ..!

ಆಟೋ ಹತ್ತಿ ಕುಳಿತ ನಂತರ ವಜ್ರಮುನಿ, `ಸಾಠ್ ಅಂದರೆ ಎಷ್ಟೋ?’ ಎಂದು ತನ್ನ ಜತೆಗಿದ್ದವರನ್ನು ಕೇಳಿದ್ದಾನೆ. ಅರವತ್ತು ಎಂದು ಗೊತ್ತಾಗುತ್ತಿದ್ದಂತೆ