ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಕಂಸನ ಆರ್ಭಟಕ್ಕೆ ಪಂಚೆ ಒದ್ದೆಯಾಗಿತ್ತು!

ಪೋಸ್ಟ್ ಶೇರ್ ಮಾಡಿ
ಅಶ್ವತ್ಥ ನಾರಾಯಣ
ನಟ

ರಂಗಭೂಮಿ ಹಿನ್ನೆಲೆಯ ಚಿತ್ರನಟ ಅಶ್ವತ್ಥ ನಾರಾಯಣ ಅವರಿಗೆ ಇಂದು (ಮೇ 22) 88 ವರ್ಷ ತುಂಬಿತು. ವರನಟ ರಾಜಕುಮಾರ್ ಅವರ ತಂದೆ, ರಂಗನಟ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಅವರೊಂದಿಗೆ ನಾಟಕಗಳಲ್ಲಿ ಅಶ್ವತ್ಥರು ಬಾಲನಟನಾಗಿ ನಟಿಸಿದ್ದರು. ಆಗಿನ ಅವರ ಒಂದು ನೆನಪು.

ನನ್ನ ತಂದೆ ರಂಗಪ್ಪನವರು ಗುಬ್ಬಿ ನಾಟಕ ಕಂಪನಿಯ ಪ್ರಮುಖ ಕಲಾವಿದರಲ್ಲೊಬ್ಬರು. ಹತ್ತನ್ನೆರೆಡರ ಹರೆಯದಲ್ಲೇ ನಾನು ಕೂಡ ಪಾತ್ರಗಳಲ್ಲಿ ನಟಿಸಲು ಆರಂಭಿಸಿದ್ದೆ. ಅದು 1948ರ ಸಂದರ್ಭ. ಮೊದಲ ಬಾರಿಗೆ ನಾನು `ಶ್ರೀ ಕೃಷ್ಣಲೀಲಾ’ ನಾಟಕದಲ್ಲಿ ಕೃಷ್ಣನ ಪಾತ್ರ ಹಾಕಿದ್ದೆ. ರಾಜಕುಮಾರ್ (ಆಗ ರಾಜ್‍ಗೆ 15 ವರ್ಷ) ಬಲರಾಮನ ಪಾತ್ರದಲ್ಲಿದ್ದರು. ಆಗ ರಾಜಕುಮಾರ್ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರ ಕಂಸನ ಪಾತ್ರ ಬಹು ಜನಪ್ರಿಯವಾಗಿತ್ತು.

ನಾಟಕ ಆರಂಭವಾಗಿ ಕೆಲವೇ ನಿಮಿಷಗಳಾಗಿತ್ತು. ಅದು ಕಂಸನನ್ನು ಸಂಹರಿಸುವ ಸನ್ನಿವೇಶ. ನಾನು ಮತ್ತು ರಾಜ್ ವೇದಿಕೆಯಲ್ಲಿದ್ದೆವು. ರಂಗದ ಮೇಲೆ ಕಂಸನ ಪಾತ್ರದಲ್ಲಿದ್ದ ಪುಟ್ಟಸ್ವಾಮಯ್ಯನವರ ಪ್ರವೇಶವಾಯ್ತು. ಮೆಟ್ಟಿಲುಗಳನ್ನಿಳಿದು ಅವರು ಇಳಿದು ಬರುವ ರಭಸಕ್ಕೆ ನನ್ನ ಎದೆ ಝೆಲ್ಲೆಂದಿತು. ಅವರ ಭಯಂಕರ ನೋಟ, ವೀರಾವೇಶದ ಮಾತುಗಳನ್ನು ಕೇಳುತ್ತಿದ್ದಂತೆ ಕಣ್ಣು ಮಂಜಾದಂತಾಗಿ ಅಲ್ಲೇ ಕುಸಿದೆ. ಉಟ್ಟಿದ್ದ ಕಚ್ಚೆಪಂಚೆ ಒದ್ದೆಯಾಯ್ತು!

ಆ ಸನ್ನಿವೇಶದಲ್ಲಿ ಕೃಷ್ಣನಾದ ನಾನೇ ಕಂಸನನ್ನು ಸಂಹರಿಸಬೇಕಿತ್ತು. ಆದರೆ ಪಂಚೆ ಒದ್ದೆಯಾಗಿದ್ದರಿಂದ ನಾನು ಎದ್ದು ನಿಲ್ಲುವ ಸ್ಥಿತಿಯಲ್ಲಿರಲಿಲ್ಲ. ಆಗೊಂದು ಉಪಾಯ ಹೊಳೆಯಿತು. ಕುಳಿತಲ್ಲಿಂದಲೇ, `ಅಣ್ಣಾ ಬಲರಾಮ, ಕಂಸನನ್ನು ನೀವೇ ಸಂಹರಿಸಿಬಿಡಿ..!’ ಎಂದೆ. ನನ್ನ ಪಜೀತಿ ಅರ್ಥ ಮಾಡಿಕೊಂಡ ಬಲರಾಮನ ಪಾತ್ರದಲ್ಲಿದ್ದ ರಾಜ್ ಸನ್ನಿವೇಶವನ್ನು ಸೂಕ್ಷ್ಮವಾಗಿ ನಿಭಾಯಿಸಿದರು. ಆ ಸನ್ನಿವೇಶ ಮುಗಿದು ಪರದೆ ಬೀಳುತ್ತಿದ್ದಂತೆ ಒದ್ದೆಯಾಗಿದ್ದ ಪಂಚೆ ಮುದುರಿಕೊಂಡು ಮೇಕಪ್ ಕೋಣೆಗೆ ಓಡಿದೆ!

ರಂಗನಟ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ

ಮತ್ತಷ್ಟು ಸೋಜಿಗ

ಜನಪ್ರಿಯ ಪೋಸ್ಟ್ ಗಳು

ಪ್ರಕಾಶ್ ರೈ ಮೇಷ್ಟ್ರಾಗಿದ್ದು!

ಹಾಗೆ ನೋಡಿದರೆ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದರೂ ಪ್ರಕಾಶನಿಗೂ ಮಲಯಾಳಂ ಸರಿಯಾಗಿ ಗೊತ್ತಿಲ್ಲ. ಆದರೆ ಭಾಷೆಯ ಬಗ್ಗೆ ತಿಳಿವಳಿಕೆ ಇತ್ತಷ್ಟೆ. ನಟಿ

ಬಾಲಣ್ಣ ನೆರವಿಗೆ ಬಂದರು…

ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ ಬಾಲಕೃಷ್ಣ ಅವರೊಂದಿಗೆ ಚಿತ್ರವೊಂದರಲ್ಲಿ ನಟಿಸುವ ಪುಟ್ಟ ಅವಕಾಶ ಸಿಕ್ಕಿತ್ತು. ಆಗಿನ್ನೂ ನಾನು ಸಿನಿಮಾಗೆ

ಶಶಿ ಸಾಬ್ ಪಕ್ಕ ಕುಳಿತ ರೋಮಾಂಚನ!

ಕನ್ನಡದ ಹಿರಿಯ ಸಿನಿಮಾ ಛಾಯಾಗ್ರಾಹಕ ಬಿ.ಎಸ್‌.ಬಸವರಾಜ್‌ ವೃತ್ತಿಬದುಕಿನ ಆರಂಭದಲ್ಲಿ ಹಿಂದಿ ಚಿತ್ರಗಳಿಗೆ ಕೆಲಸ ಮಾಡಿದ್ದರು. ಆಗೊಮ್ಮೆ ನಟ ಶಶಿಕಪೂರ್‌ ಅವರೊಂದಿಗೆ