ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಸಾಹಸಿ ನಿರ್ಮಾಪಕ ಬಿ.ಎಸ್.ರಂಗಾ

ಪೋಸ್ಟ್ ಶೇರ್ ಮಾಡಿ

ಸಿನಿಮಾ ಛಾಯಾಗ್ರಾಹಕ, ನಿರ್ದೇಶಕ, ನಿರ್ಮಾಪಕರಾಗಿ ಕನ್ನಡಿಗ ಬಿ.ಎಸ್.ರಂಗಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು. ಕನ್ನಡದಲ್ಲಿ ಸಿನಿಮಾಗಳ ನಿರ್ಮಾಣವೇ ಕಷ್ಟವಾಗಿದ್ದ ದಿನಗಳಲ್ಲಿ ವಿಕ್ರಂ ಸ್ಟುಡಿಯೋ ಸ್ಥಾಪಿಸಿ, ಕನ್ನಡ ಚಿತ್ರಗಳ ನಿರ್ಮಾಣ, ನಿರ್ದೇಶನದೊಂದಿಗೆ ತಾಯ್ನೆಲದಲ್ಲಿ ಚಿತ್ರರಂಗ ನೆಲೆಯೂರುವಲ್ಲಿ ನೆರವಾದ ತಂತ್ರಜ್ಞರಲ್ಲೊಬ್ಬರು. ಕಾಲೇಜು ದಿನಗಳಲ್ಲೇ ಛಾಯಾಗ್ರಹಣದತ್ತ ಆಸಕ್ತರಾಗಿದ್ದ ಅವರು ಮುಂಬಯಿಯಲ್ಲಿ ಖ್ಯಾತ ಛಾಯಾಗ್ರಾಹಕ ಕೃಷ್ಣಗೋಪಾಲ್ ಅವರಲ್ಲಿ ಸಹಾಯಕರಾಗಿ ಅನುಭವ ಪಡೆದರು. ಮುಂದೆ ಮದರಾಸಿನ ಜೆಮಿನಿ ಸ್ಟುಡಿಯೋದಲ್ಲಿ ಕೆಲಸ ಮಾಡಿದ ಅವರು ಸ್ವತಂತ್ರ್ಯವಾಗಿ ಛಾಯಾಗ್ರಹಣ ಮಾಡಿದ್ದು ‘ಭಕ್ತ ನಾರದರ್’ ತಮಿಳು ಚಿತ್ರಕ್ಕೆ. ಮುಂದೆ ಮೈಲುಗಲ್ಲು ಸೃಷ್ಟಿಸಿದ ತೆಲುಗು ಸಿನಿಮಾ ‘ದೇವದಾಸ್’ ಸೇರಿದಂತೆ 20ಕ್ಕೂ ಹೆಚ್ಚು ತಮಿಳು, ತೆಲುಗು ಸಿನಿಮಾಗಳಿಗೆ ಛಾಯಾಗ್ರಹಣ ಮಾಡಿದರು.

1950ರಲ್ಲಿ ಬೆಂಗಳೂರಿನಲ್ಲಿ ಬಿ.ಎಸ್.ರಂಗಾ ‘ವಿಕ್ರಂ ಸ್ಟುಡಿಯೋಸ್ ಅಂಡ್ ಲ್ಯಾಬ್’ ಸ್ಥಾಪಿಸಿದರು. ಸೂಕ್ತ ಬೆಂಬಲ ಸಿಗದಿದ್ದರಿಂದ ಅನಿವಾರ್ಯವಾಗಿ ಸ್ಟುಡಿಯೋವನ್ನು ಮದರಾಸಿಗೆ ಸ್ಥಳಾಂತರಿಸಬೇಕಾಯ್ತು. ಅವರ ಸಂಸ್ಥೆಯಡಿ ಭಕ್ತ ಮಾರ್ಕಂಡೇಯ, ಮಹಿಷಾಸುರ ಮರ್ಧಿನಿ, ಮಹಾಸತಿ ಅನಸೂಯ, ಪಾರ್ವತಿ ಕಲ್ಯಾಣ, ಹಾಸ್ಯರತ್ನ ರಾಮಕೃಷ್ಣ, ಅಮರಶಿಲ್ಪಿ ಜಕಣಾಚಾರಿ, ಭಾಗ್ಯವಂತ ಸೇರಿದಂತೆ ಮೈಲುಗಲ್ಲು ಎನಿಸಿದ ಹಲವಾರು ಕನ್ನಡ, ತಮಿಳು, ತೆಲುಗು ಐತಿಹಾಸಿ, ಪೌರಾಣಿಕ, ಸಾಮಾಜಿಕ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದರು. ಕಿರುತೆರೆಯಲ್ಲಿಯೂ ಅವರು ಕೆಲವು ಸರಣಿಗಳನ್ನು ನಿರ್ಮಿಸಿದ್ದಾರೆ.
(ಮಾಹಿತಿ ಕೃಪೆ: ಕನ್ನಡ ಚಲನಚಿತ್ರ ಇತಿಹಾಸ ಪುಸ್ತಕ)

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಸಾಮಾಜಿಕ ಕಳಕಳಿಯ ನಟ ವಿವೇಕ್

ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯನಟ ವಿವೇಕ್‌. 220ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಅವರು ಸಾಮಾಜಿಕ ಕಳಕಳಿ ಹೊಂದಿದ್ದ ಕಲಾವಿದ. 40,50ರ

ಟಿ.ಎಂ.ಸೌಂದರರಾಜನ್

ಭಾರತೀಯ ಚಿತ್ರರಂಗ ಕಂಡ ಪ್ರಮುಖ ಹಿನ್ನೆಲೆ ಗಾಯಕ ಟಿ.ಎಂ.ಸೌಂದರರಾಜನ್‌. ಕರ್ನಾಟಕ ಶಾಸ್ತ್ರೀಯ ಸಂಗೀತಗಾರ. ಆತ್ಮೀಯರಿಂದ ‘ಟಿಎಂಎಸ್‌’ ಎಂದೇ ಕರೆಸಿಕೊಳ್ಳುತ್ತಿದ್ದ ಅವರು