ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಯಶಸ್ವೀ ಚಿತ್ರನಿರ್ದೇಶಕ ವಿಜಯ್

ಪೋಸ್ಟ್ ಶೇರ್ ಮಾಡಿ
ಡಾ.ಕೆ.ಪುಟ್ಟಸ್ವಾಮಿ
ಲೇಖಕ

ತಾರಾವ್ಯವಸ್ಥೆಯ ಪರಿಣಾಮಗಳಿಂದ ತೆರೆಯ ಮರೆಯಲ್ಲಿಯೇ ಉಳಿದ  ವಿಜಯ್ ಅವರು ತಾರೆಗಳ ಹಂಗಿಲ್ಲದೆ ನಿರ್ದೇಶಿಸಿದ ‘ರಂಗಮಹಲ್ ರಹಸ್ಯ’ ಅಪೂರ್ವ ಸಸ್ಪೆನ್ಸ್ ಚಿತ್ರ. ಯಾವುದೇ ಕುತೂಹಲ, ನಿರೀಕ್ಷೆಗಳು ಇಲ್ಲದೆ ಚಿತ್ರವೀಕ್ಷಣೆಯ ಏಕೈಕ  ಉದ್ದೇಶದಿಂದ ಹೋದವನಿಗೆ ಸಿಕ್ಕಿದ್ದು  ಭರಪೂರ ಮನರಂಜನೆ.

ವಿಜಯ್ ಎಂಬ ಹೆಸರಿನಿಂದಲೇ ಕನ್ನಡಿಗರಿಗೆ ಪರಿಚಿತವಾಗಿದ್ದವರು ನಿರ್ದೇಶಕ ವಿಜಯಾ ರೆಡ್ಡಿ.  ಕನ್ನಡದ ಜನಪ್ರಿಯ ನಟರ  ಮುಖ್ಯವಾಹಿನಿಯ ಅನೇಕ ಚಿತ್ರ ನಿರ್ದೇಶಕರಾಗಿ ಅವರ ಕಾಣಿಕೆ  ದೊಡ್ಡದು.  ಯಶಸ್ವೀ ಚಿತ್ರಗಳ ಸೂತ್ರಧಾರ ವಿಜಯ್ ಅವರು ಸಾಹಸ, ಕುತೂಹಲ, ಸಾಮಾಜಿಕ, ಐತಿಹಾಸಿಕ ಹೀಗೆ ಬಗೆಬಗೆಯ ಚಿತ್ರ ನಿರ್ದೇಶಿಸಿದರೂ ಸಹ ಅವುಗಳ ಯಶಸ್ಸು ಬಹುತೇಕ ಕಲಾವಿದರ ಖಾತೆಗೆ ಜಮಾ ಆಗಿದ್ದು ವಿಚಿತ್ರ. ‘ಗಂಧದ ಗುಡಿ’ ಮೂಲಕ ರಾಜ್ ಚಿತ್ರಗಳ ಜತೆ ಆರಂಭವಾದ ಸಖ್ಯದಲ್ಲಿ ಮಯೂರ, ನಾ ನಿನ್ನ ಮರೆಯಲಾರೆ ಶ್ರೀನಿವಾಸ ಕಲ್ಯಾಣ, ಸನಾದಿ ಅಪ್ಪಣ್ಣ ಅಂಥ ಸೂಪರ್ ಹಿಟ್ ಚಿತ್ರಗಳು ಜನರನ್ನು ರಂಜಿಸಿದವು. ನಾ ನಿನ್ನ ಬಿಡಲಾರೆ, ಮುಳ್ಳಿನ ಗುಲಾಬಿ  ಚಿತ್ರ ಅನಂತನಾಗ್ ಅವರನ್ನು ಯಶಸ್ಸಿನ ಸಿಂಹಾಸನದಲ್ಲಿ ಕುಳ್ಳಿರಿಸಿದರೆ, ಆಟೋರಾಜ ಚಿತ್ರ ಶಂಕರ್ ನಾಗ್ ಅವರ ವೃತ್ತಿ ಬದುಕು ಮತ್ತು ಇಮೇಜಿಗೆ ದೊಡ್ಡ ತಿರುವು ನೀಡಿತು. ರಾಜ್ ಅವರ 150ನೇ ಚಿತ್ರ ನಿರ್ದೇಶಿಸಿದ ಖ್ಯಾತಿ ಅವರದು. ವಿಷ್ಣು ಅವರ ಸೂಪರ್ ಹಿಟ್ ಚಿತ್ರಗಳಲ್ಲಿ ವಿಜಯ್ ಅವರ ‘ದೇವಾ’ ಕೂಡ ಒಂದು. ಕನ್ನಡದ ಮತ್ತೊಬ್ಬ ಯಶಸ್ವೀ ನಿರ್ದೇಶಕ ವಿ. ಸೋಮಶೇಖರ್ ಅವರ ಜೊತೆ ನಿರ್ಮಾಪಕರಾಗಿ ‘ಆರದ ಗಾಯ’ ಮುಂತಾದ ಚಿತ್ರ ನಿರ್ಮಿಸಿದ ಸಾಹಸಿ.

ನಿರ್ದೇಶಕ ವಿಜಯ್‌, ಛಾಯಾಗ್ರಾಹಕ ಚಿಟ್ಟಿಬಾಬು

ತಾರಾವ್ಯವಸ್ಥೆಯ ಪರಿಣಾಮಗಳಿಂದ ತೆರೆಯ ಮರೆಯಲ್ಲಿಯೇ ಉಳಿದ  ವಿಜಯ್ ಅವರು ತಾರೆಗಳ ಹಂಗಿಲ್ಲದೆ ನಿರ್ದೇಶಿಸಿದ ಅವರ ಮೊದಲಚಿತ್ರ ‘ರಂಗಮಹಲ್ ರಹಸ್ಯ’ ನನ್ನಲ್ಲಿ  ಉಂಟು ಮಾಡಿದ ರೋಮಾಂಚನ ಅಂತಿಂಥದ್ದಲ್ಲ. ಯಾವುದೇ ಕುತೂಹಲ, ನಿರೀಕ್ಷೆಗಳು ಇಲ್ಲದೆ ಚಿತ್ರವೀಕ್ಷಣೆಯ ಏಕೈಕ  ಉದ್ದೇಶದಿಂದ ಹೋದವನಿಗೆ ಸಿಕ್ಕಿದ್ದು  ಭರಪೂರ ಮನರಂಜನೆ. ಒಂದು ಅಪೂರ್ವ ಸಸ್ಪೆನ್ಸ್ ಚಿತ್ರ ನೋಡಿದ ರೋಮಾಂಚನ. ಆವರೆವಿಗೂ ಅಂಥದ್ದೊಂದು ಕನ್ನಡ ಸಿನಿಮಾ ಬಂದಿರಲಿಲ್ಲ. ತನ್ನ ಕುತೂಹಲಕಾರಿ ನಿರೂಪಣೆಯಿಂದ,  ಊಹಿಸಲಾಗದ ಅಂತ್ಯದಿಂದ ರಂಜಿಸಿದ ಸಿನಿಮಾ. ಭಾರತಿ, ಶ್ರೀನಾಥ್, ಉದಯ ಕುಮಾರ್, ನರಸಿಂಹರಾಜು, ಸಂಪತ್,  ನಾಗಪ್ಪ, ಬಿ ವಿ ರಾಧಾ, ಹನುಮಂತಾಚಾರ್… ಹೀಗೆ ಹಿಂಡು ಕಲಾವಿದರಿದ್ದರೂ ಎಲ್ಲರ ಪಾತ್ರಕ್ಕೂ ಚಿತ್ರದಲ್ಲಿ ಸ್ಥಾನವಿತ್ತು, ಮಹತ್ವವಿತ್ತು.. ಅಂಥದ್ದೊಂದು ಬಿಗಿಯಾದ ಚಿತ್ರಕತೆಯನ್ನು ಅವರು ಹೆಣೆದಿದ್ದರು.  ವಿಜಯ್  ಅವರು ಅನೇಕ ಸೂಪರ್ ಹಿಟ್ ಚಿತ್ರಗಳು ನೆನಪಿನಲ್ಲಿ ಉಳಿದರೂ ನನಗೆ  ‘ರಂಗಮಹಲ್ ರಹಸ್ಯ’ ಸದಾ ಕಾಡುವ ಚಿತ್ರ, ಅನೇಕ ಕಾರಣಗಳಿಗೆ. ಇಂತಹ ಚಿತ್ರಗಳ ಮೂಲಕ ಕನ್ನಡದ ಮನಸ್ಸುಗಳಲ್ಲಿ ವಿಜಯ್‌ ಸದಾ ಉಳಿದಿರುತ್ತಾರೆ.

ಊಟಿಯಲ್ಲಿ ‘ಸನಾದಿ ಅಪ್ಪಣ್ಣ’ (1977) ಸಿನಿಮಾ ಚಿತ್ರೀಕರಣದ ಸಂದರ್ಭ. ಛಾಯಾಗ್ರಾಹಕ ಡಿ.ವಿ.ರಾಜಾರಾಂ, ನಟ ರಾಜಕುಮಾರ್, ನಿರ್ಮಾಪಕ ವಿಕ್ರಂ ಶ್ರೀನಿವಾಸ್, ನಿರ್ದೇಶಕ ವಿಜಯ್, ಸಹ ಛಾಯಾಗ್ರಾಹಕ ಬಿ.ಎಸ್.ಬಸವರಾಜ್. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಸ್ವರ ಸಾರ್ವಭೌಮ ‘ಟಿ.ಜಿ.ಲಿಂಗಪ್ಪ’

ಶಾಸ್ತ್ರೀಯ ಸಂಗೀತದ ಅಪಾರ ಅಭಿಮಾನಿಯಾಗಿದ್ದರೂ ಜಗತ್ತಿನ ವಿಭಿನ್ನ ಶೈಲಿಯ ಸಂಗೀತದ ಪರಿಚಯ ಟಿ.ಜಿ.ಲಿಂಗಪ್ಪ ಅವರಿಗಿತ್ತು. ಅದರಲ್ಲೂ ಲ್ಯಾಟಿನ್‌ ಅಮೆರಿಕಾದ ಬುಡಕಟ್ಟು

ಕಂಚಿನಕಂಠದ ನಟ ಅರಸ್

ಕನ್ನಡ ಚಿತ್ರರಂಗದ ಕಂಚಿನಕಂಠದ ನಟ ಸುಂದರ ಕೃಷ್ಣ ಅರಸ್. ಚಾಮರಾಜನಗರ ಸಮೀಪದ ಉತ್ತವಳ್ಳಿ ಹುಟ್ಟೂರು. ಯಳಂದೂರಿನಲ್ಲಿ ಹೈಸ್ಕೂಲ್ ಶಿಕ್ಷಣ ಮುಗಿಸಿದ