ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಅಪರೂಪದ ನಟ ರಾಜ್‌ಕುಮಾರ್

ಪೋಸ್ಟ್ ಶೇರ್ ಮಾಡಿ

ನಾಟಕೀಯ ಅಭಿನಯ, ಹಾವ – ಭಾವ, ಸಂಭಾಷಣೆಗಳಿಂದಲೇ ಹೆಸರು ಮಾಡಿದ ನಟ ರಾಜ್‌ಕುಮಾರ್‌. ನಟನಾಗುವುದಕ್ಕಿಂತ ಮುನ್ನ ಅವರು ಮುಂಬೈನಲ್ಲಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಐವತ್ತರ ದಶಕದಲ್ಲಿ ತಮ್ಮ ಹೆಸರನ್ನು ರಾಜ್‌ಕುಮಾರ್ ಎಂದು ಬದಲಿಸಿಕೊಂಡ ಅವರು ಇನ್‌ಸ್ಪೆಕ್ಟರ್ ವೃತ್ತಿ ತೊರೆದು ಪೂರ್ಣ ಪ್ರಮಾಣದ ಸಿನಿಮಾ ನಟರಾದರು.

ರಾಜ್‌ಕುಮಾರ್ ಹುಟ್ಟಿದ್ದು 1926, ಅಕ್ಟೋಬರ್ 8ರಂದು ಬಲುಚಿಸ್ತಾನ್‌ನಲ್ಲಿ (ಇದೀಗ ಪಾಕಿಸ್ತಾನ್‌ನಲ್ಲಿದೆ). ಅವರ ಜನ್ಮನಾಮ ಕುಲಭೂಷಣ್ ಪಂಡಿತ್. 1952ರಲ್ಲಿ `ರಂಗೀಲಿ’ ಚಿತ್ರದೊಂದಿಗೆ ಅವರು ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ರೆಹನಾ ಚಿತ್ರದ ನಾಯಕಿ. ಐವತ್ತರ ದಶಕದಲ್ಲಿ ಸತತವಾಗಿ ರಾಜ್‌ಕುಮಾರ್ ತಮ್ಮ ಅಸಾಂಪ್ರದಾಯಕ ಅಭಿಯನದೊಂದಿಗೆ ಹಲವು ಪ್ರಯೋಗ ನಡೆಸಿದರು. ಶಮ್ಮಿಕಪೂರ್ (ಉಜಾಲಾ) ಮತ್ತು ದಿಲೀಪ್ ಕುಮಾರ್ (ಪೈಗಮ್) ಚಿತ್ರಗಳಲ್ಲಿ ಖಳ ಛಾಯೆಯ ಪಾತ್ರಗಳಲ್ಲೂ ನಟಿಸಿದ್ದಾಯ್ತು. ಆದರೆ ಈ ಯಾವ ಪಾತ್ರಗಳಿಂದಲೂ ಅವರಿಗೆ ಹೆಸರು ಸಿಗಲಿಲ್ಲ.

ದಿಲೀಪ್ ಕುಮಾರ್ ಜೊತೆ

ರಾಜ್‌ಕುಮಾರ್ ಸಿನಿಮಾ ಜೀವನಕ್ಕೆ ತಿರುವು ಕೊಟ್ಟದ್ದು ಮೆಹಬೂಬ್‌ರ `ಮದರ್ ಇಂಡಿಯಾ’ ಚಿತ್ರ. ನಾಯಕಿ ನರ್ಗಿಸ್ ಪತಿಯಾಗಿ ಅವರಿಲ್ಲಿ ಅಮೋಘ ಅಭಿನಯ ನೀಡಿದ್ದರು. ಕೇವಲ ಹದಿನೈದು ನಿಮಿಷಗಳ ಪಾತ್ರದ ಮೂಲಕ ತಾವೊಬ್ಬ ಅಭಿಜಾತ ಕಲಾವಿದ ಎಂದು ರಾಜ್‌ಕುಮಾರ್ ಸಾಬೀತು ಮಾಡಿದ್ದರು. ಶರಾರತ್, ಪೈಗಮ್ (ಕಿಶೋರ್ ಕುಮಾರ್), ದಿಲ್ ಅಪ್ನಾ ಔರ್ ಪ್ರೀತ್ ಪರಾಯಿ, ಘರಾನಾ, ದಿಲ್ ಏಕ್ ಮಂದಿರ್, ವಕ್ತ್, ಹಮ್‌ರಾಝ್, ನೀಲ್ ಕಮಲ್, ಪಾಕೀಝಾ, ಲಾಲ್ ಪತ್ಥರ್, ಹೀರ್ ರಾಂಝಾ, ಹಿಂದೂಸ್ತಾನ್ ಕಿ ಕಸಮ್, ಏಕ್ ಸೆ ಬಡ್ ಕರ್ ಏಕ್, ಕರ್ಮಯೋಗಿ ಅವರ ಪ್ರಮುಖ ಸಿನಿಮಾಗಳು. ಅರವತ್ತರ ದಶಕದ ಮಧ್ಯದ ಅವಧಿಯಲ್ಲಿ ಅವರು ವೃತ್ತಿ ಜೀವನದ ಉತ್ತುಂಗಕ್ಕೇರಿದ್ದರು.

1980ರ ವೇಳೆಗೆ ರಾಜ್‌ಕುಮಾರ್ ಪೋಷಕ ಹಾಗೂ ಖಳ ಪಾತ್ರಗಳತ್ತ ಹೊರಳಿದರು. ಚಂಬಲ್ ಕಿ ಕಸಮ್, ಕುದ್ರತ್, ಏಕ್ ನಯೀ ಪಹೇಲಿ, ಮರ್ತೇ ದಮ್ ತಕ್, ಜಂಗ್ ಬಾಝ್, ಪೊಲೀಸ್ ಪಬ್ಲಿಕ್ ಚಿತ್ರಗಳಲ್ಲಿನ ಅವರ ಪೋಷಕ ಪಾತ್ರಗಳಿಗೆ ಅಪಾರ ಜನಮೆಚ್ಚುಗೆ ವ್ಯಕ್ತವಾಯಿತು. 1991ರ `ಸೌಧಾಗರ್’ ಚಿತ್ರದಲ್ಲಿ ಹಿರಿಯ ನಟ ದಿಲೀಪ್ ಕುಮಾರ್ ಜತೆಗಿನ ಅವರ ಪಾತ್ರ ಸೊಗಸಾಗಿತ್ತು. ಮೊದಲ ಬಾರಿಗೆ ಮೇರು ತಾರೆಯರು ಒಟ್ಟಾಗಿ ನಟಿಸಿದ ಚಿತ್ರವೆಂದು `ಸೌಧಾಗರ್’ ಬಿಡುಗಡೆ ವೇಳೆ ಸಂಚಲನ ಸೃಷ್ಟಿಯಾಗಿತ್ತು. `ತಿರಂಗ’ ರಾಜ್‌ಕುಮಾರ್ ಅವರ ಕೊನೆಯ ಯಶಸ್ವೀ ಸಿನಿಮಾ. ರಾಜ್‌ಕುಮಾರ್ ಅಭಿನಯಿಸಿದ ಕೊನೆಯ ಸಿನಿಮಾ `ಗಾಡ್ ಅಂಡ್ ಗನ್’ (1995). 1996ರ ಜುಲೈನಲ್ಲಿ ತಮ್ಮ 69ನೇ ವಯಸ್ಸಿನಲ್ಲಿ ಅವರು ನಿಧನರಾದರು.

ಪುತ್ರ ಪುರು ರಾಜ್‌ಕುಮಾರ್ ಜೊತೆ

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಸ್ವರ ಸಾರ್ವಭೌಮ ‘ಟಿ.ಜಿ.ಲಿಂಗಪ್ಪ’

ಶಾಸ್ತ್ರೀಯ ಸಂಗೀತದ ಅಪಾರ ಅಭಿಮಾನಿಯಾಗಿದ್ದರೂ ಜಗತ್ತಿನ ವಿಭಿನ್ನ ಶೈಲಿಯ ಸಂಗೀತದ ಪರಿಚಯ ಟಿ.ಜಿ.ಲಿಂಗಪ್ಪ ಅವರಿಗಿತ್ತು. ಅದರಲ್ಲೂ ಲ್ಯಾಟಿನ್‌ ಅಮೆರಿಕಾದ ಬುಡಕಟ್ಟು

ಕಂಚಿನಕಂಠದ ನಟ ಅರಸ್

ಕನ್ನಡ ಚಿತ್ರರಂಗದ ಕಂಚಿನಕಂಠದ ನಟ ಸುಂದರ ಕೃಷ್ಣ ಅರಸ್. ಚಾಮರಾಜನಗರ ಸಮೀಪದ ಉತ್ತವಳ್ಳಿ ಹುಟ್ಟೂರು. ಯಳಂದೂರಿನಲ್ಲಿ ಹೈಸ್ಕೂಲ್ ಶಿಕ್ಷಣ ಮುಗಿಸಿದ