ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

‘ಗುಗ್ಗು ಮಹಲ್’ ಖ್ಯಾತಿಯ ಕಮೆಡಿಯನ್

ನಟ
ಪೋಸ್ಟ್ ಶೇರ್ ಮಾಡಿ

‘ನಟಶೇಖರ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾದ ಕಮೆಡಿಯನ್‌ ಗುಗ್ಗು ಅವರು ಇನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಂದು (ಮಾರ್ಚ್‌ 18) ಅವರ ಜನ್ಮದಿನ.

ಕನ್ನಡ ಸಿನಿಮಾ ರೂಪುಗೊಂಡ ಹಾದಿಯಲ್ಲಿ ಹಲವಾರು ಅಪರೂಪದ ವ್ಯಕ್ತಿತ್ವಗಳು, ಸಂದರ್ಭಗಳು ಕಾಣಸಿಗುತ್ತವೆ. ಈ ಹಾದಿಯಲ್ಲಿನ ಅಂತಹ ವಿಶಿಷ್ಟ ವ್ಯಕ್ತಿ ಕಮೆಡಿಯನ್ ಗುಗ್ಗು. 50-60ರ ದಶಕದ ಸಿನಿಮಾಗಳಲ್ಲಿ ನಟಿಸಿದ ಕನ್ನಡ ಹಾಸ್ಯನಟ. ನಿಜನಾಮಧೇಯ ಅಶ್ವತ್ಥ ನಾರಾಯಣ ಶೆಟ್ಟಿ. ಚಿಕ್ಕಂದಿನಿಂದಲೂ ನಾಟಕದ ಗೀಳು ಹೊಂದಿದ್ದ ಅವರಿಗೆ ನಟನೆಯ ಪ್ರಾಥಮಿಕ ತರಬೇತಿ ಸಿಕ್ಕಿದ್ದು ಹಿರಣ್ಣಯ್ಯ ಮಿತ್ರಮಂಡಳಿಯಲ್ಲಿ.

‘ನಟಶೇಖರ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾದರು. ಇನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆಗ ಸಿನಿಮಾ ಸೇರಬೇಕೆಂದು ಆಸೆಯಿಂದ ಬರಿಗೈಯಲ್ಲಿ ಮದರಾಸಿಗೆ ಹೋಗುವವರು “ಗುಗ್ಗು ಮಹಲ್’ ನಲ್ಲಿ ಆಶ್ರಯ ಪಡೆಯುತ್ತಿದ್ದರಂತೆ. ಧರ್ಮ, ಜಾತಿ, ಪಂಗಡ ಯಾವುದನ್ನೂ ನೋಡದೆ ಗುಗ್ಗು ತಮ್ಮ ಮನೆಯಲ್ಲಿ ಆಶ್ರಯ ನೀಡುತ್ತಿದ್ದರು. ಮಹಲ್ ಎಂದು ಕರೆಸಿಕೊಂಡಾಕ್ಷಣ ಅದೇನೂ ಬಂಗಲೆಯಾಗಿರಲಿಲ್ಲ, ಪುಟ್ಟ ಮನೆಯಷ್ಟೆ. ಆದರೆ ಗುಗ್ಗು ಅವರ ಮನಸ್ಸು ದೊಡ್ಡದಿತ್ತು. ಹಾಸ್ಯ ಪಾತ್ರಗಳಲ್ಲಿ ನಟಿಸುತ್ತಿದ್ದ ಈ ನಟ ಮನೆಗೆ ಬಂದವರಿಗೆ ಕೈಲಾದ ನೆರವು ನೀಡುತ್ತಿದ್ದರು. ಆಶ್ರಯ ಪಡೆದವರು ಪ್ರೀತಿಯಿಂದ ಮನೆಯನ್ನು `ಗುಗ್ಗು ಮಹಲ್’ ಎಂದೇ ಕರೆದರು.

ಕಮೆಡಿಯನ್ ಗುಗ್ಗು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಪಟ್ಟಿಯಲ್ಲಿ ಐದಾರು ತಮಿಳು, ತೆಲುಗು ಚಿತ್ರಗಳೂ ಇವೆ. ರಾಣಿಹೊನ್ನಮ್ಮ, ಅಣ್ಣ ತಂಗಿ, ವೀರಕೇಸರಿ, ಬೇವು ಬೆಲ್ಲ, ನಾಗಪೂಜಾ, ಮಹಿರಾವಣ, ಹಸಿರು ತೋರಣ, ಮಾವನ ಮಗಳು, ಬೆಟ್ಟದ ಭೈರವ ಅವರ ಪ್ರಮುಖ ಸಿನಿಮಾಗಳು. ಕನ್ನಡ ಚಿತ್ರರಂಗದ ಬೆಳವಣಿಗೆಯ ಹಾದಿಯಲ್ಲಿ ನೂರಾರು ಜನರಿಗೆ ನೆರವಾದ ಗುಗ್ಗು (18/03/1918 – 22/06/1984) ನೋವಿನಲ್ಲೂ ಖುಷಿಯಿಂದ ಬಾಳ್ವೆ ನಡೆಸಿದರು.

ಸಿದ್ದಲಿಂಗಯ್ಯ ನಿರ್ದೇಶನದ ‘ದೂರದ ಬೆಟ್ಟ’ (1973) ಚಿತ್ರದಲ್ಲಿ ದ್ವಾರಕೀಶ್, ಎಂ.ಎಸ್.ಸತ್ಯ, ಕಮೆಡಿಯನ್ ಗುಗ್ಗು, ಬೆಂಗಳೂರು ನಾಗೇಶ್ ಮತ್ತು ಚಿ.ಉದಯಶಂಕರ್.

ನೆನಪು ಸಾಧನೆ - ಸ್ಫೂರ್ತಿ

ಅಪರೂಪದ ಸಾಧಕ ವೀರಾಸ್ವಾಮಿ

ಉತ್ತರ ಭಾರತದ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ `ಡ್ರೀಮ್‍ಲ್ಯಾಂಡ್’ ಸಿನಿಮಾ ಹಂಚಿಕೆ ಕಚೇರಿ ನಡೆಸುತ್ತಿದ್ದರು. ಅವರಲ್ಲಿ

ಮಹಾನಟಿ ಮನೋರಮ

‘ಮಾಳಯಿಟ್ಟ ಮಂಗೈ’ (1958) ತಮಿಳು ಚಿತ್ರದೊಂದಿಗೆ ಮನೋರಮ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. 1985ರಲ್ಲಿ

ಜನಪ್ರಿಯ ಪೋಸ್ಟ್ ಗಳು

ಕನ್ನಡಕ್ಕೊಬ್ಬರೇ ಬಾಲಣ್ಣ

ಬಾಲಣ್ಣ ತೀರಿಹೋಗಿ 26 ವರ್ಷ ಆಗಿದ್ದರೂ ಅವರಿಗೆ ಅವರ ಪಾತ್ರಗಳಿಗೆ ಸರಿಸಾಟಿ ಯಾರಿದ್ದಾರೆ? ಬಾಲಣ್ಣನವರಿಗೆ ಸರಿಸಾಟಿಯಾಗಿ ನಿಲ್ಲುವವರು ಬಾಲಣ್ಣನವರು ಮಾತ್ರ.

ಮಮ್ತಾಜ್‌ ಬೇಗಮ್

ಹಿಂದಿ ಸಿನಿಮಾಗಳ ಪೋಷಕ ಪಾತ್ರಗಳಲ್ಲಿ ಚಿರಪರಿಚಿತ ನಟಿ ಮಮ್ತಾಜ್ ಬೇಗಮ್‌. ವಿ.ಶಾಂತಾರಾ ನಿರ್ದೇಶನದ ‘ದಹೇಜ್‌’ (1950) ಚಿತ್ರದಲ್ಲಿ ಪೃಥ್ವಿರಾಜ್ ಕಪೂರ್