ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಸಾಹಸಿ ನಿರ್ಮಾಪಕ ದಗ್ಗುಬಾಟಿ ರಾಮಾನಾಯ್ಡು

ಪೋಸ್ಟ್ ಶೇರ್ ಮಾಡಿ
ಮೋಹನ್ ಬಾಬು ಬಿ.ಕೆ.
ಲೇಖಕ

ವಿವಿಧ ಭಾಷೆಗಳ 150ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸಿದ ಹೆಗ್ಗಳಿಕೆ ಡಿ.ರಾಮಾನಾಯ್ಡು ಅವರದು. ತೆಲುಗು ಚಿತ್ರೋಧ್ಯಮದ ಚಲನಶೀಲತೆಗೆ ಅವರ ಸಂಸ್ಥೆಯ ಕೊಡುಗೆ ಮಹತ್ವದ್ದು. ಇಂದು (ಜೂನ್‌ 6) ಅವರ ಜನ್ಮದಿನ. – ಲೇಖಕ ಮೋಹನ್ ಬಾಬು ಅವರು ಮೇರು ಚಿತ್ರಕರ್ಮಿಯನ್ನು ನೆನಪು ಮಾಡಿಕೊಂಡಿದ್ದಾರೆ.

ತೆಲುಗು ಚಿತ್ರರಂಗದ ಪ್ರಖ್ಯಾತ ಸಂಸ್ಥೆ ಸುರೇಶ್ ಪ್ರೊಡಕ್ಷನ್ಸ್‌ ಸಂಸ್ಥಾಪಕರು ದಗ್ಗುಬಾಟಿ ರಾಮಾನಾಯ್ಡು. ಜನಿಸಿದ್ದು 1936ರ ಜೂನ್‌ 6ರಂದು. ತೆಲುಗು, ತಮಿಳು, ಕನ್ನಡ, ಹಿಂದಿ, ಮಲಯಾಳಂ, ಬೆಂಗಾಲಿ, ಪಂಜಾಬಿ, ಮರಾಠಿ ಭಾಷೆಗಳಲ್ಲಿ 150ಕ್ಕೂ ಹೆಚ್ಚಿನ ಚಿತ್ರಗಳನ್ನು ನಿರ್ಮಿಸಿದವರು ರಾಮಾನಾಯ್ಡು. ಇದೊಂದು ಗಿನ್ನಿಸ್ ದಾಖಲೆಯೂ ಹೌದು.

ತಮ್ಮ ದೊಡ್ಡ ಮಗ ಸುರೇಶ್ ಹೆಸರಿನಲ್ಲಿ ಎನ್‌ಟಿಆರ್‌ ಅಭಿನಯದ ‘ರಾಮುಡು ಭೀಮುಡು’ ಚಿತ್ರದ ಮೂಲಕ ಪ್ರಾರಂಭಿಸಿದ ಸುರೇಶ್ ಪ್ರೊಡಕ್ಷನ್ಸ್ ಎಂಬ ಸಂಸ್ಥೆ ಈಗಲೂ ಚಿತ್ರಗಳನ್ನು ನಿರ್ಮಾಣ ಮಾಡುತ್ತಿದೆ. ಆಂಧ್ರ, ತೆಲಂಗಾಣ, ಕರ್ನಾಟಕ, ತಮಿಳುನಾಡಿನಲ್ಲಿ ವಿತರಣಾ ಕಚೇರಿಗಳನ್ನು ಹೊಂದಿದೆ. ಅವರ ಹಿರಿಯ ಮಗ ಸುರೇಶ್ ಚಿತ್ರನಿರ್ಮಾಣದಲ್ಲಿ ತೊಡಗಿಸಿಕೊಂಡರೆ, ಕಿರಿಯ ಪುತ್ರ ವೆಂಕಟೇಶ್ ಖ್ಯಾತ ಚಿತ್ರನಟನಾಗಿ ಹೆಸರು ಮಾಡಿದ್ದಾರೆ. ಮೊಮ್ಮಗ ರಾಣ (‘ಬಾಹುಬಲಿ’ ಸರಣಿ ಚಿತ್ರಗಳ ಬಲ್ಲಾಳ ದೇವ), ಮತ್ತೊಬ್ಬ ಮಗಳ ಮಗ ನಾಗ ಚೈತನ್ಯ (ನಟ ನಾಗಾರ್ಜುನ ಮಗ) ಇಬ್ಬರೂ ತೆಲುಗು ಚಿತ್ರರಂಗದ ಯುವ ತಾರೆಯರು.

ನಟ ಎನ್‌ಟಿಆರ್‌ ಜೊತೆ ರಾಮಾನಾಯ್ಡು

ಅನೇಕ ಹೊಸ ನಾಯಕ – ನಾಯಕಿಯರಷ್ಟೇ ಅಲ್ಲ, ಹತ್ತಾರು ನಿರ್ದೇಶಕರು, ಸಾಹಿತಿಗಳು, ಸಂಗೀತ ನಿರ್ದೇಶಕರು, ಪೋಷಕ ನಟರು, ಖಳನಟರು.. ಅವರ ಸಂಸ್ಥೆಯಡಿ ಬೆಳ್ಳಿತೆರೆಗೆ ಪರಿಚಯವಾಗಿದ್ದಾರೆ. ಅದಾಗಲೇ ಗುರುತಿಸಿಕೊಂಡಿದ್ದ ನಟ-ನಟಿಯರ ವೃತ್ತಿ ಬದುಕಿಗೆ ರಾಮಾನಾಯ್ಡು ನಿರ್ಮಾಣದ ಚಿತ್ರಗಳು ತಿರುವು ನೀಡಿವೆ. ಕನ್ನಡದಲ್ಲಿ ಜೀವನ ತರಂಗ, ತವರುಮನೆ ಉಡುಗೊರೆ, ಮಾಂಗಲ್ಯ, ಮದುವೆ ಆಗೋಣ ಬಾ ಚಿತ್ರಗಳನ್ನು ನಿರ್ಮಿಸಿದ್ದಾರೆ. ಅವರ ಸಂಸ್ಥೆಯಡಿ ತಯಾರಾದ ಹಲವಾರು ಚಿತ್ರಗಳು ರಾಷ್ಟ್ರ, ರಾಜ್ಯ, ಫಿಲ್ಮ್‌ಫೇರ್‌ ಪ್ರಶಸ್ತಿಗಳನ್ನು ಪಡೆದಿವೆ. ರಾಮಾನಾಯ್ಡು 13ನೇ ಲೋಕಸಭೆಗೆ ಬಾಪಟ್ಲ ಕ್ಷೇತ್ರದಿಂದ ಆಯ್ಕೆಯಾಗಿ ಲೋಕಸಭಾ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಸೇವೆಗೆ ಪುರಸ್ಕರಿಸಿ ಕೇಂದ್ರ ಸರಕಾರ ಪದ್ಮಭೂಷಣ ಹಾಗೂ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಿದೆ. ಆಂಧ್ರ ಸರಕಾರ ರಘುಪತಿ ವೆಂಕಯ್ಯ ನಾಯ್ಡು ಪ್ರಶಸ್ತಿ ಹಾಗೂ ಗೌರವ ಡಾಕ್ಟರೇಟ್ ಸಂದಿದೆ. 2015ರಲ್ಲಿ ರಾಮಾನಾಯ್ಡು ಇಹಲೋಕ ತ್ಯಜಿಸಿದರು.

ಡಿ.ರಾಮಾನಾಯ್ಡು

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

‘ದಾದಾ’ ಎಂದೇ ಕರೆಸಿಕೊಳ್ಳುತ್ತಿದ್ದ ನಿರ್ಮಾಣ ನಿರ್ವಾಹಕ, ನಟ ಶಿವಾಜಿ ರಾವ್

ಸಿನಿಮಾವೊಂದು ತಯಾರಾಗುವ ಪ್ರತೀ ಹಂತದಲ್ಲಿ ನಿರ್ಮಾಣ ನಿರ್ವಾಹಕನ ಪಾತ್ರ ದೊಡ್ಡದು. ಚಿತ್ರದಲ್ಲಿ ಕೆಲಸ ಮಾಡುವ ನಟ-ನಟಿಯರು ಹಾಗೂ ತಂತ್ರಜ್ಞರಿಗೆ ಚಿತ್ರೀಕರಣದ

ಸ್ವಂತಿಕೆಯ ಹರಿಕಾರ ಶಂಕರ್ ಸಿಂಗ್

(ಬರಹ: ಎನ್‌.ಎಸ್‌.ಶ್ರೀಧರಮೂರ್ತಿ, ಲೇಖಕ) ಚಿತ್ರನಿರ್ಮಾಪಕ, ನಿರ್ದೇಶಕ ಶಂಕರ್‌ ಸಿಂಗ್‌ ಅವರ ಜನ್ಮಶತಮಾನೋತ್ಸವ ಸಂದರ್ಭವಿದು (ಜನನ 15, ಆಗಸ್ಟ್ 1921). ಕನ್ನಡ