ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ನಟಿ ಶೋಭಾ ನೆನಪು

ಬಾಲು ಮಹೇಂದ್ರ ನಿರ್ದೇಶನದ ‘ಕೋಕಿಲ’ (1977) ಕನ್ನಡ ಚಿತ್ರದಲ್ಲಿ ಕಮಲಹಾಸನ್‌ ಮತ್ತು ಶೋಭಾ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಿಂಚಿ ಮರೆಯಾದ ಅಪರೂಪದ ಪ್ರತಿಭೆ ಶೋಭಾ. ‘ಥಟ್ಟುಂಗೈ ತಿರಕ್ಕಪ್ಪದಮ್‌’ (1966) ತಮಿಳು ಚಿತ್ರದಲ್ಲಿ ಬಾಲನಟಿಯಾಗಿ ಬೆಳ್ಳಿತೆರೆಗೆ ಪರಿಚಯವಾದ ಅವರು ‘ಉಥ್ರದ ರಾತ್ರಿ’ ಮಲಯಾಳಂ ಚಿತ್ರದಲ್ಲಿ ನಾಯಕಿಯಾದರು. ಎರಡೇ ವರ್ಷಗಳಲ್ಲಿ ತಮಿಳು, ಮಲಯಾಳಂ, ಕನ್ನಡ ಮತ್ತು ತೆಲುಗು ಭಾಷೆಯ ಹತ್ತಾರು ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದರು. ‘ಪಸಿ’ ತಮಿಳು ಚಿತ್ರದ ಉತ್ತಮ ನಟನೆಗೆ ಅವರಿಗೆ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿ ಸಂದಿತು. ಕೇರಳ ರಾಜ್ಯ ಸರ್ಕಾರದ ಮೂರು ಪ್ರಶಸ್ತಿ, ಎರಡು ಫಿಲ್ಮ್‌ಫೇರ್‌ ಗೌರವ ಪಡೆದಿದ್ದಾರೆ. ಕೋಕಿಲ, ಅಪರಿಚಿತ, ಅಮರ ಮಧುರ ಪ್ರೇಮ… ಶೋಭಾ ಅಭಿನಯದ ಕನ್ನಡ ಚಿತ್ರಗಳು. 1980ರ ಮೇ 1ರಂದು ಆತ್ಮಹತ್ಯೆ ಮಾಡಿಕೊಂಡು ಅಕಾಲಿಕವಾಗಿ ಅಗಲಿದಾಗ ಅವರಿಗೆ ಹದಿನೆಂಟು ವರ್ಷವಷ್ಟೆ. ಇಂದು (ಸೆಪ್ಟೆಂಬರ್‌ 23) ಶೋಭಾ ಜನ್ಮದಿನ.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು