ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಸದ್ದಿಲ್ಲದೆ ಸುದ್ದಿಯಾದ ‘ಸಾರಾಂಶ್’

ಪೋಸ್ಟ್ ಶೇರ್ ಮಾಡಿ
ಮಲ್ಲಿಕಾರ್ಜುನ ಮೇಟಿ
ಲೇಖಕ

ಮಹೇಶ್ ಭಟ್‌ ನಿರ್ದೇಶನದ ‘ಸಾರಾಂಶ್‌’ (1984) ಹಿಂದಿ ಸಿನಿಮಾ ಸರಳ ಕತೆ, ನಿರೂಪಣೆಯೊಂದಿಗೆ ಪ್ರೇಕ್ಷಕರನ್ನು ಮೋಡಿ ಮಾಡಿತ್ತು. ಈ ಸಿನಿಮಾ ತೆರೆಕಂಡು ಮೊನ್ನೆ ಮೇ 25ಕ್ಕೆ ಮೂವತ್ತೇಳು ವರ್ಷ. ಲೇಖಕ, ಸಿನಿಮಾ ಮಾಹಿತಿ ಸಂಗ್ರಹಕಾರ ಮಲ್ಲಿಕಾರ್ಜುನ ಮೇಟಿ ಅವರು ಚಿತ್ರವನ್ನು ನೆನಪು ಮಾಡಿಕೊಂಡಿದ್ದಾರೆ.

1984ರಲ್ಲಿ ಸದ್ದಿಲ್ಲದೆ ಯಶಸ್ವಿಯಾದ ಹಿಂದಿ ಚಿತ್ರ ‘ಸಾರಾಂಶ್’. ಚಿತ್ರದಲ್ಲಿ ನಾಯಕನಿಲ್ಲ, ನಾಯಕಿ ಇಲ್ಲ, ಮಸಾಲೆ ಚಿತ್ರವಲ್ಲ, ಅಧ್ಧೂರಿ ಬಜೆಟ್ ಇಲ್ಲ, ಅದ್ಭುತ ಲೋಕೇಶನ್ ಇಲ್ಲ, ಹೊಡೆದಾಟವಿಲ್ಲ, ಹಾಸ್ಯವಿಲ್ಲ. ಆದರೂ ಜನ ಮೆಚ್ಚುಗೆ ಪಡೆಯಿತು. ಸರಳ ಕತೆಯನ್ನು ಅಚ್ಚುಕಟ್ಟಾಗಿ ನಿರೂಪಿಸಿ ಪ್ರೇಕ್ಷಕರನ್ನು ತಲುಪಬಹುದು ಎಂದು ತೋರಿಸಿಕೊಟ್ಟರು ನಿರ್ದೇಶಕ ಮಹೇಶ ಭಟ್. ವೃದ್ಧ ತಂದೆ – ತಾಯಿ ಪಾತ್ರದಲ್ಲಿ ಅನುಪಮ್ ಖೇರ್ ಹಾಗೂ ರೋಹಿಣಿ ಹತ್ತಂಗಡಿ ಇವರದ್ದು ಅಮೋಘ ಅಭಿನಯ.

ಇದ್ದೊಬ್ಬ ಮಗ ವಿದೇಶದಲ್ಲಿರುತ್ತಾನೆ. ಅವನ ನೆನಪಲ್ಲಿಯೇ ಇರುವ ಇವರು. ಅನಿರೀಕ್ಷಿತವಾಗಿ ಮಗನ ಸಾವಿನ ಸುದ್ದಿ ಬರುತ್ತದೆ. ವಿದೇಶದಿಂದ ಮೃತ ಮಗನ ಚಿತಾಭಸ್ಮ ಇವರ ಕೈ ಸೇರುತ್ತದೆ. ಇವರಿಬ್ಬರ ವೇದನೆ ಹೇಳತೀರದು. ಆಗ ಹರೆಯದ ವಯಸ್ಸಿನ ಅನುಪಮ್‌ ಖೇರ್ ರವರು ವೃದ್ಧ ತಂದೆಯ ಪಾತ್ರದಲ್ಲಿ ಅತ್ಯುತ್ತಮವಾಗಿ ಅಭಿನಯಿಸಿದ್ದಾರೆ. ಗೀತ ಸಂಗೀತ ಮತ್ತು ಹಿನ್ನೆಲೆ ಸಂಗೀತ (ಅಜಿತ್‌ ವರ್ಮನ್‌) ಚಿತ್ರಪೂರ್ತಿ ಒಂದೇ ಹದವಾಗಿ ಬರುತ್ತದೆ. ಮಮತೆ, ವಾತ್ಸಲ್ಯ, ವಯಸ್ಸಿಗೆ ಬಂದ ಮಗನ ಅಗಲಿಕೆಯ ನೋವು – ಸಂಕಟವನ್ನು ತುಂಬಾ ಮನ ಮುಟ್ಟುವಂತೆ ಚಿತ್ರಿಸಿದ್ದಾರೆ.

ಚಿತ್ರ ಎಲ್ಲರ ಮನ ತಟ್ಟುವುದಂತು ನಿಜ. ಕರುಳಿನ ಸಂಬಂಧಗಳನ್ನು ನಿರೂಪಿಸುವ ಇಂತಹ ಚಿತ್ರಗಳು ಇಂದಿನ ಜನಾಂಗಕ್ಕೆ ಅವಶ್ಯಕ. ಶಾಂತವಾಗಿ, ಒಳಗೊಳಗೆ ನೋವು ಸೃಜಿಸುವ ಮನ ಮಿಡಿಯುವ ಚಿತ್ರ. ಇದೇ ಮಾದರಿಯಲ್ಲಿ ತೆಲುಗಿನಲ್ಲಿ ‘ಸೀತಾರಾಮಯ್ಯಗಾರಿ ಮನುವುರಾಲು’ ಬಂದಿತು. ಇದೇ ಕನ್ನಡದಲ್ಲಿ ‘ಬೆಳ್ಳಿಮೋಡ’ವಾಯ್ತು. ‘ಸಾರಾಂಶ್’ ನ ಈ ಚಿತ್ರ ಮುಖಪುಟದಲ್ಲಿ ಬಂದಿದ್ದನ್ನು ನೋಡಿ, ಆಗ ಚಿತ್ರದ ನಂತರ ಅನುಪಮ್‌ ಖೇರ್ ರವರಿಗೆ ಒಮ್ಮೆಲೆ ಸುಭಾಷ್ ಘಾಯ್ ರವರ ದೊಡ್ಡ ಚಿತ್ರ ‘ಕರ್ಮ್‌’ನಲ್ಲಿ ವಿಭಿನ್ನ ಖಳನಾಯಕನ ಪಾತ್ರಕ್ಕೆ ಅವಕಾಶ ಸಿಕ್ಕಿತು. ‘ಸಾರಾಂಶ್‌’ ಯೂಟ್ಯೂಬ್‌ನಲ್ಲಿದೆ, ಆಸಕ್ತರು ಗಮನಿಸಿ.

ಈ ಬರಹಗಳನ್ನೂ ಓದಿ