ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಪ್ರಗತಿ – ಕೆ.ಎಸ್‌.ಎಲ್‌.ಸ್ವಾಮಿ

ಬೆಂಗಳೂರು ಗಾಂಧಿನಗರದಲ್ಲಿದ್ದ ‘ಪ್ರಗತಿ’ ಸ್ಟುಡಿಯೋದಲ್ಲಿ ಚಿತ್ರನಿರ್ದೇಶಕ ಬಿ.ನಾಗೇಶ್‌ ಬಾಬ, ನಿರ್ಮಾಪಕ ಚಂದೂಲಾಲ್ ಜೈನ್‌, ನಿರ್ದೇಶಕ ಕೆ.ಎಸ್‌.ಎಲ್‌.ಸ್ವಾಮಿ (ರವೀ), ಸ್ಥಿರಚಿತ್ರ ಛಾಯಾಗ್ರಾಹಕ ಅಶ್ವತ್ಥ ನಾರಾಯಣ ಸಮಾಲೋಚನೆ. ಕನ್ನಡ ಚಿತ್ರರಂಗ ಕಂಡ ಪ್ರಮುಖ ಚಿತ್ರನಿರ್ದೇಶಕರಲ್ಲೊಬ್ಬರು ಕೆ.ಎಸ್‌.ಎಲ್‌.ಸ್ವಾಮಿ. ‘ತೂಗುದೀಪ’ (1966) ಚಿತ್ರದ ಮೂಲಕ ಸ್ವತಂತ್ರ್ಯ ನಿರ್ದೇಶಕರಾದ ಅವರು ಗಮನಾರ್ಹ ಚಿತ್ರಗಳನ್ನು ನೀಡಿದ್ದಾರೆ. ಅವರ ನಿರ್ಮಾಣ, ನಿರ್ದೇಶನದ ‘ಜಂಬೂ ಸವಾರಿ’ ಅತ್ಯುತ್ತಮ ಮಕ್ಕಳ ಸಿನಿಮಾ ರಾಷ್ಟ್ರಪ್ರಶಸ್ತಿಗೆ ಪಾತ್ರವಾಗಿದೆ. ಇಂದು ಕೆ.ಎಸ್‌.ಎಲ್‌.ಸ್ವಾಮಿ (21/02/1939 – 20/10/2015) ಅವರ ಸಂಸ್ಮರಣಾ ದಿನ.

Share this post