ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಮುನ್ನುಡಿ – ಛಾಯಾಸಿಂಗ್, ದತ್ತಣ್ಣ

ಪಿ.ಶೇ‍ಷಾದ್ರಿ ಚೊಚ್ಚಲ ನಿರ್ದೇಶನದ ‘ಮುನ್ನುಡಿ’ (2000) ಚಿತ್ರದಲ್ಲಿ ಛಾಯಾ ಸಿಂಗ್‌, ಎಚ್‌.ಜಿ.ದತ್ತಾತ್ರೇಯ. ಸಾಹಿತಿ ಬೊಳುವಾರ ಮೊಹಮ್ಮದ್ ಕುಯ್ಞಿ ಅವರ ‘ಮುತ್ತುಚ್ಚೇರ’ ಕತೆಯನ್ನು ಆಧರಿಸಿದ ಪ್ರಯೋಗ. ಚಿತ್ರದಲ್ಲಿನ ‘ಹಸನಬ್ಬ’ ಪಾತ್ರದ ಶ್ರೇಷ್ಠ ನಿರ್ವಹಣೆಗೆ ದತ್ತಣ್ಣ ಅತ್ಯುತ್ತಮ ಪೋಷಕ ನಟ ರಾಷ್ಟ್ರಪ್ರಶಸ್ತಿಗೆ ಭಾಜನರಾದರು. ಈ ಪಾತ್ರಕ್ಕೆ ಅವರಿಗೆ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿಯೂ ಸಂದಿದೆ. ಇಂದು (ಏಪ್ರಿಲ್‌ 20) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ದತ್ತಣ್ಣ 80ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.

Share this post