ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಸಿಜಿಕೆ ನೆನಪು

ಖ್ಯಾತ ರಂಗಕರ್ಮಿ ಸಿ.ಜಿ.ಕೃಷ್ಣಸ್ವಾಮಿ (ಸಿಜಿಕೆ) ಅವರ ‘ರಂಗನಿರಂತರ’, ಕನ್ನಡ ರಂಗಭೂಮಿಯ ಗಮನಾರ್ಹ ಪ್ರಯೋಗ. ‘ರಂಗನಿರಂತರ’ – 150 ದಿನಗಳ ಸತತ ರಂಗಪ್ರಯೋಗಕ್ಕೆ ಚಾಲನೆ ನೀಡಿದ ಸಂದರ್ಭವಿದು. ಬೆಂಗಳೂರು ರವೀಂದ್ರ ಕಲಾಕ್ಷೇತ್ರದ ಬಳಿ ನಡೆದ ಕಾರ್ಯಕ್ರಮದಲ್ಲಿ (1986) ಸಿಜಿಕೆ ಮಾತನಾಡುತ್ತಿದ್ದಾರೆ. ವೇದಿಕೆಯಲ್ಲಿ ರಂಗನಿರ್ದೇಶಕ ಆರ್.ನಾಗೇಶ್‌, ಮೇಕಪ್ ಕಲಾವಿದ ರಾಮಕೃಷ್ಣ, ಎಂಎಲ್‌ಎ ಬಿ.ಎ.ಉಮರಬ್ಬ, ಆಗ ಸಚಿವರಾಗಿದ್ದ
ಜೀವರಾಜ ಆಳ್ವ ಇದ್ದಾರೆ. ಕನ್ನಡ ರಂಗಭೂಮಿಯ ಮಹತ್ವದ ನಾಟಕಕಾರರಲ್ಲೊಬ್ಬರಾದ ಸಿಜಿಕೆ (27/06/1950 – 11/01/2006) ಜನ್ಮದಿನವಿಂದು. (ಫೋಟೊ ಕೃಪೆ: ಪರಮೇಶ್ವರ ಗುರುಸ್ವಾಮಿ)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು