ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಸಪ್ತಪದಿ

ಬೆಂಗಳೂರು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ‘ಸಪ್ತಪದಿ’ (1992) ಚಿತ್ರದ ಹಾಡಿನ ಧ್ವನಿಮುದ್ರಣ ಸಂದರ್ಭ. ಸಂಗೀತ ಸಂಯೋಜಕ ಉಪೇಂದ್ರಕುಮಾರ್, ನಟ ರಾಜಕುಮಾರ್, ಗೀತರಚನೆಕಾರ ಚಿ.ಉದಯಶಂಕರ್ ಇದ್ದಾರೆ. ಈ ಚಿತ್ರಕ್ಕೆ ರಾಜ್‌ ಅವರು ಹಾಡಿದ ಶೀರ್ಷಿಕೆ ಗೀತೆ ಬಹು ಜನಪ್ರಿಯ. ಖ್ಯಾತ ಸಂಗೀತ ಸಂಯೋಜಕ ಉಪೇಂದ್ರ ಕುಮಾರ್ (18/07/1941 – 24/01/2002) ಪ್ರಮುಖವಾಗಿ ಕನ್ನಡ ಸಿನಿಮಾ, ಒರಿಯಾ, ತಮಿಳು, ತುಳು, ತೆಲುಗು, ಮಲಯಾಳಂ ಭಾಷೆಗಳ 200ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಇಂದು ಅವರ ಜನ್ಮದಿನ. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು