ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ತಂದೆ – ಮಗ

‘ಭಕ್ತಪ್ರಹ್ಲಾದ’ (1958) ಚಿತ್ರದ ‘ಪ್ರಹ್ಲಾದ’ನ ಪಾತ್ರದಲ್ಲಿ ಬಾಲನಟ ಲೋಕೇಶ್ ಮತ್ತು ‘ಹಿರಣ್ಯಕಶಿಪು’ ಪಾತ್ರದಲ್ಲಿ ಅವರ ತಂದೆ, ಖ್ಯಾತ ನಟ ಎಂ.ವಿ.ಸುಬ್ಬಯ್ಯನಾಯ್ಡು. ಎಚ್‌.ಎಸ್‌.ಕೃಷ್ಣಸ್ವಾಮಿ ಮತ್ತು ಎಂ.ವಿ.ಸುಬ್ಬಯ್ಯನಾಯ್ಡು ನಿರ್ದೇಶಿಸಿದ್ದ ಈ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಉದಯಕುಮಾರ್, ನರಸಿಂಹರಾಜು, ಬಾಲಕೃಷ್ಣ ನಟಿಸಿದ್ದಾರೆ. ಚಿತ್ರದಲ್ಲಿ 20 ಗೀತೆ – ವಚನಗಳಿದ್ದು, ವಿ.ಎಸ್.ರಾಜನ್ ಮತ್ತು ಪೆರುಮಾಳ್‌ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರದ ಮೂಲಕ ಕ್ಲಾಪ್‌ಬಾಯ್ ಆಗಿ ಚಿತ್ರರಂಗ ಪ್ರವೇಶಿಸಿದ ವಿ.ಸೋಮಶೇಖರ್ ಮುಂದೆ ಕನ್ನಡದ ಯಶಸ್ವೀ ಚಿತ್ರನಿರ್ದೇಶಕರಾಗಿ ಹೆಸರು ಮಾಡಿದರು. (ಫೋಟೊ ಕೃಪೆ: ‘ವಿಜಯಚಿತ್ರ’ ಸಿನಿಪತ್ರಿಕೆ ವಿಶೇಷ ಸಂಚಿಕೆ)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು