ಸಿ.ಆರ್.ಸಿಂಹ ನಿರ್ದೇಶನದ ‘ಕರ್ಣ’ ನಾಟಕದ (1987) ಹಾಸ್ಯಪಾತ್ರಗಳಲ್ಲಿ ಆರ್.ಎಸ್.ರಾಜಾರಾಂ ಮತ್ತು ಎಸ್.ಕೆ. ಮಾಧವ ರಾವ್. ಸರ್ಕಾರಿ ನೌಕರರಾಗಿದ್ದ ರಾಜಾರಾಂ ಅವರಿಗೆ ನಟನೆ ಪ್ರವೃತ್ತಿ. ಪ್ರಮುಖ ರಂಗತಂಡಗಳ ಹತ್ತಾರು ಜನಪ್ರಿಯ ನಾಟಕಗಳಲ್ಲಿ ಅವರು ಅಭಿನಯಿಸಿದ್ದಾರೆ. ಸಿನಿಮಾ ಮತ್ತು ಕಿರುತೆರೆಯಲ್ಲೂ ಸಕ್ರಿಯರಾಗಿದ್ದ ರಾಜಾರಾಂ (10/07/1938 – 10/05/2021) ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ಗೌರವ ಸಂದಿದೆ. ಇಂದು ಅವರ ಜನ್ಮದಿನ.

ನಟ ಆರ್.ಎಸ್.ರಾಜಾರಾಂ ನೆನಪು
- ಕನ್ನಡ ರಂಗಭೂಮಿ - ಸಿನಿಮಾ
Share this post