ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಟಾಮ್ ಆಲ್ಟರ್ ನೆನಪು

ಸತ್ಯಜಿತ್ ರೇ ನಿರ್ದೇಶನದ ‘ಶತ್ರಂಜ್‌ ಕೆ ಖಿಲಾರಿ’ (1977) ಹಿಂದಿ ಚಿತ್ರದಲ್ಲಿ ‘ಕ್ಯಾಪ್ಟನ್ ವೆಸ್ಟನ್‌’ ಪಾತ್ರದಲ್ಲಿ ಟಾಮ್ ಆಲ್ಟರ್‌. ಹಿಂದಿ ಸಿನಿಮಾ, ಕಿರುತೆರೆ ಮತ್ತು ರಂಗಭೂಮಿ ನಟ ಟಾಮ್ ಆಲ್ಟರ್ ಹುಟ್ಟಿ ಬೆಳೆದದ್ದು ಭಾರತದಲ್ಲಿ. ಅಮೆರಿಕಾ ಮೂಲದ ಅವರ ಪೋಷಕರು 1920ರ ಆಸುಪಾಸಿನಲ್ಲಿ ಇಲ್ಲಿಗೆ ಬಂದು ನೆಲೆಸಿದರು. ಆಗ ಹಿಂದಿ ಸಿನಿಮಾದ ಸೂಪರ್‌ಸ್ಟಾರ್ ರಾಜೇಶ್ ಖನ್ನಾ ಅವರಿಂದ ಪ್ರಭಾವಿತರಾದ ಟಾಮ್‌ರಿಗೆ ನಟನಾಗುವ ಉಮೇದು ಬೆಳೆಯಿತು. ಪುಣೆಯ ಫಿಲ್ಮ್ ಅಂಡ್‌ ಟೆಲಿವಿಷನ್ ಇನ್‌ಸ್ಟಿಟ್ಯೂಟ್‌ನಲ್ಲಿ ಕಲಿತ ಅವರು ‘ಚರಸ್‌’ (1976) ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದರು. ಮುಂದೆ ಹಲವು ಹಿಂದಿ ಚಿತ್ರಗಳಲ್ಲಿ ಬ್ರಿಟಿಷ್‌ ಅಧಿಕಾರಿಯ ಪಾತ್ರಗಳಲ್ಲಿ ಕಾಣಿಸಿಕೊಂಡ ಅವರು ‘ರಾಮ್‌ ತೇರಿ ಗಂಗಾ ಮೈಲಿ’ (1985) ಚಿತ್ರದಲ್ಲಿ ಮೊದಲ ಬಾರಿಗೆ ಭಾರತೀಯ ಪಾತ್ರದಲ್ಲಿ ನಟಿಸಿದರು. ನೌಕ್ರಿ, ಹಮ್ ಕಿಸೀ ಸೆ ಕಮ್ ನಹೀ, ಸಾಹಿಬ್‌ ಬಹದ್ದೂರ್‌, ಕ್ರಾಂತಿ… ಅವರ ಕೆಲವು ಪ್ರಮುಖ ಹಿಂದಿ ಚಿತ್ರಗಳು. ಇಂದು ಟಾಮ್ ಆಲ್ಟರ್‌ (22/06/1950 – 29/09/2017) ಸಂಸ್ಮರಣಾ ದಿನ.

Share this post