ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಸುದರ್ಶನ್‌ – ಶೈಲಶ್ರೀ

ಕನ್ನಡ ಚಿತ್ರರಂಗ ಕಂಡ ತಾರಾ ದಂಪತಿ ಜೋಡಿಗಳಲ್ಲಿ ಸುದರ್ಶನ್‌ – ಶೈಲಶ್ರೀ ಜೋಡಿಯೂ ಒಂದು. ಆಗ ಶೂಟಿಂಗ್ ಸ್ಟುಡಿಯೋವೊಂದರಲ್ಲಿ ಸ್ಥಿರಚಿತ್ರ ಛಾಯಾಗ್ರಾಹಕ ಭವಾನಿ ಲಕ್ಷ್ಮೀನಾರಾಯಣ ಅವರ ಕ್ಯಾಮೆರಾಗೆ ಈ ಜೋಡಿ ಸೆರೆಯಾಗಿದ್ದು ಹೀಗೆ. ಮೇರು ಚಿತ್ರಕರ್ಮಿ ಆರ್‌.ನಾಗೇಂದ್ರರಾಯರ ಕಿರಿಯ ಪುತ್ರ ಸುದರ್ಶನ್‌ ನಾಯಕ, ಖಳ, ಪೋಷಕ ನಟನಾಗಿ ಕನ್ನಡಿಗರಿಗೆ ಚಿರಪರಿಚಿತರು. ಸುದರ್ಶನ್‌ ಮತ್ತು ಶೈಲಶ್ರೀ ಅವರದ್ದು ಪ್ರೇಮವಿವಾಹ. ನಗುವ ಹೂವು, ಕಾಡಿನ ರಹಸ್ಯ, ಕಳ್ಳರ ಕಳ್ಳ, ಮಾಲತಿ ಮಾಧವ… ಮುಂತಾದ ಕೆಲವು ಚಿತ್ರಗಳಲ್ಲಿ ಇಬ್ಬರೂ ಜೋಡಿಯಾಗಿ ಅಭಿನಯಿಸಿದ್ದಾರೆ.

Share this post